
ಇತ್ತ ಕಾಂಗ್ರೆಸ್ ನಾಯಕರು ಸಹ ಬಿಜೆಪಿ ತನ್ನ ವಿಫಲತೆಯ್ನ ಮುಚ್ಚಿಕೊಳ್ಳುವ ಉದ್ದೇಶಪೂರ್ವಕವಾಗಿ ಭದ್ರತಾಲೋಪದ ಕಾರಣ ಒಡ್ಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಪಂಜಾಬ್ ನ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟ ಸಂದರ್ಭದಲ್ಲಿ ಭದ್ರತಾ ಉಲ್ಲಂಘನೆಯಾಗಿಲ್ಲ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹೇಳಿಕೆಯನ್ನೆ ಪ್ರತಿಧ್ವನಿಸಿದ್ದಾರೆ.
ಫಿರೋಜ್ ಪುರ ಸಭೆಯಲ್ಲಿ ಕುರ್ಚಿಗಳು ಖಾಲಿ ಇದ್ದವು ಅನ್ನೋದನ್ನ ಗಮನಿಸಬೇಕು. ರೈತರು ವರ್ಷಗಟ್ಟಲೆ ದೆಹಲಿ ಗಡಿಯಲ್ಲಿ ಕಾದು ಕುಳಿತಿದ್ದರು. ಆದರೆ niನ್ನೆ ಪ್ರಧಾನಿ ಮೋದಿ ಕೇವಲ 15-20 ನಿಮಿಷ ಕಾದಿದ್ದಕ್ಕೆ ಅವರಿಗೆ ತೊಂದರೆಯಾಗಿದೆ. ರೈತರಿಗೊಂದು ಕಾನೂನು ನಿಮಗೊಂದು ಕಾನೂನು, ರೈತರಿಗೊಂದು ನಿಯಮ ನಿಮಗೊಂದು ನಿಯಮ ಇದೆಂತಾ ಯೋಚನೆ ಪ್ರಧಾನಿಯವರೆ ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ ನೀವು ರೈತರ ಆದಾಯವನ್ನ ದ್ವಿಗುಣ ಮಾಡುತ್ತೇವೆ ಎಂದು ಭರವಸೆ ನೀಡಿದ್ರಿ, ಆದ್ರೆ ಈಗ ಆಗಿರುವುದೇನು ಅವರ ಬಳಿ ಇರುವುದನ್ನು ಕಸಿದು ಕೊಂಡಿದ್ದಿರಾ ಎಂದು ಸಿಧು ಆಕ್ರೋಶ ಹೊರಹಾಕಿದ್ದಾರೆ.