alex Certify ಭರ್ಜರಿ ಗುಡ್ ನ್ಯೂಸ್: ಡೆಲ್ಟಾ ಸೇರಿ ಕೊರೊನಾದ ಎಲ್ಲ ರೂಪಾಂತರಿಗಳ ವಿರುದ್ಧ ‘ಸೂಪರ್ ಲಸಿಕೆ’ ಸದ್ಯದಲ್ಲೇ ರೆಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಡೆಲ್ಟಾ ಸೇರಿ ಕೊರೊನಾದ ಎಲ್ಲ ರೂಪಾಂತರಿಗಳ ವಿರುದ್ಧ ‘ಸೂಪರ್ ಲಸಿಕೆ’ ಸದ್ಯದಲ್ಲೇ ರೆಡಿ

ಕೊರೊನಾ ವೈರಸ್ ನ ಎಲ್ಲಾ ರೂಪಾಂತರಿಗಳ ವಿರುದ್ಧ ಹೋರಾಡುವ ಸೂಪರ್ ಲಸಿಕೆಯನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ.

ಭಾರತದಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರದ 40 ಪ್ರಕರಣಗಳು ಪತ್ತೆಯಾಗಿವೆ. ಇದನ್ನು ಸರ್ಕಾರವು ‘ವೇರಿಯಂಟ್ ಆಫ್ ಕನ್ಸರ್ನ್’ ಎಂದು ಟ್ಯಾಗ್ ಮಾಡಿದೆ. ಮಹಾರಾಷ್ಟ್ರದಲ್ಲಿ ಒಟ್ಟು 21, ಮಧ್ಯಪ್ರದೇಶದಲ್ಲಿ 6, ಕೇರಳ ಮತ್ತು ತಮಿಳುನಾಡಿನಲ್ಲಿ ತಲಾ 3, ಕರ್ನಾಟಕದಲ್ಲಿ 2, ಪಂಜಾಬ್, ಆಂಧ್ರಪ್ರದೇಶ ಮತ್ತು ಜಮ್ಮುವಿನಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ವಿಜ್ಞಾನಿಗಳು ಪ್ರಸ್ತುತ ಆಂಟಿ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದಾರೆ. ಅದು ಕೋವಿಡ್ ನ ಎಲ್ಲಾ ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ಲಸಿಕೆ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ಮಾಹಿತಿ ಪ್ರಕಾರ, ವಿಜ್ಞಾನಿಗಳು ಪ್ರಸ್ತುತ ಕೋವಿಡ್ -19 ಮತ್ತು ಇತರ ಎಲ್ಲಾ ರೀತಿಯ ಕೊರೊನಾದ ವಿರುದ್ಧ ಪರಿಣಾಮಕಾರಿಯಾಗುವ ಲಸಿಕೆಯನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೆಲಸ ಮಾಡುತ್ತಿದ್ದಾರೆ.

ಲಸಿಕೆಯನ್ನು ಪ್ರಸ್ತುತ ವಿಜ್ಞಾನಿಗಳು ಇಲಿಗಳ ಮೇಲೆ ಪರೀಕ್ಷಿಸುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈಗಾಗಲೇ ಈ ಬಗ್ಗೆ ಸಂಶೋಧನೆ ಆರಂಭಿಸಿದ್ದಾರೆ.

ಸೂಪರ್ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದು ಕೋವಿಡ್‌ನ ಎಲ್ಲಾ ಪ್ರಕಾರಗಳ ವಿರುದ್ಧ ಹೋರಾಡುತ್ತದೆ. ಭವಿಷ್ಯದ ಎಲ್ಲಾ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಈ ಲಸಿಕೆ ಸಹಾಯ ಮಾಡುತ್ತದೆ. ಈ ಲಸಿಕೆಯನ್ನು ಎರಡನೇ ತಲೆಮಾರಿನ ಲಸಿಕೆ ಎಂದು ಕರೆಯಲಾಗುತ್ತದೆ. ಲಸಿಕೆ ವೈರಸ್ ನ ಎಲ್ಲಾ ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿದೆ. ಒಂದೇ ವರ್ಗದ ಎರಡು ರೂಪಾಂತರಗಳು ಕಳೆದ ಎರಡು ದಶಕಗಳಲ್ಲಿ ಜಗತ್ತಿನಲ್ಲಿ ಹಾನಿಯನ್ನುಂಟು ಮಾಡಿವೆ. ಅವುಗಳೆಂದರೆ ಒಂದು SARS ಮತ್ತು ಇನ್ನೊಂದು ಕೋವಿಡ್ -19.

ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಈ ಲಸಿಕೆಯನ್ನು ಇಲಿಗಳ ಮೇಲೆ ಪರೀಕ್ಷಿಸಲಾಗಿದೆ. ಪ್ರತಿಕಾಯಗಳು ಇಲಿಗಳಲ್ಲಿ ಉತ್ಪತ್ತಿಯಾಗುತ್ತವೆ ಎಂದು ಅಧ್ಯಯನದ ಪರೀಕ್ಷೆಗಳು ತೋರಿಸಿಕೊಟ್ಟಿವೆ. ಇದು ಸ್ಪೈಕ್ ಪ್ರೋಟೀನ್‌ ನ್ನು ಪ್ರತಿರೋಧಿಸುವ ಪ್ರತಿಕಾಯಗಳ ಬೆಳವಣಿಗೆಗೆ ಕಾರಣವಾಗಿದೆ. ಪರೀಕ್ಷಿಸಿದ ಇಲಿಗಳಿಗೆ SARS ಮತ್ತು Covid-19 ವೈರಸ್ ಸೋಂಕು ತಗುಲಿದ್ದು, ಇವೆಲ್ಲದರ ವಿವರವಾದ ಪರೀಕ್ಷೆ ನಡೆಯುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ ಅದನ್ನು ಮುಂದಿನ ವರ್ಷ ಮಾನವರ ಮೇಲೆ ಪರೀಕ್ಷಿಸಬಹುದು ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...