ಕೋವಿಡ್ ಹಾಗೂ ಹಣದುಬ್ಬರ ಏರಿಕೆಯಂತಹ ಸಮಸ್ಯೆ ನಡುವೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಪದವೀಧರರು ಅಕುಶಲ ಕೆಲಸ ಮಾಡಬೇಕಾದ ಅನೇಕ ಉದಾಹರಣೆಗಳು ಕಣ್ಣಮುಂದೆ ಇದೆ.
ಲಿಂಕ್ಡ್ ಇನ್ ಬಳಕೆದಾರರೊಬ್ಬರು ಗುರುಗ್ರಾಮ್ನಲ್ಲಿರುವ ಮನೆಗಳಿಗೆ ಗ್ಯಾಸ್ ಸಿಲಿಂಡರ್ಗಳನ್ನು ತಲುಪಿಸುವ ಮೂಲಕ ಜೀವನ ಸಾಗಿಸುವ ವಿಜ್ಞಾನ ಪದವೀಧರನ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.
ಯುಪಿಯ ಸುಲ್ತಾನ್ಪುರದ ಹಳ್ಳಿಯಿಂದ ಬಂದ 24 ವರ್ಷದ ಸಂದೀಪ್ ಯಾದವ್ ದಿನಕ್ಕೆ 25 ರಿಂದ 30 ಗ್ಯಾಸ್ ಸಿಲಿಂಡರ್ಗಳನ್ನು ವಿತರಿಸುತ್ತಾರೆ, ತಿಂಗಳಿಗೆ 12,000 ಗಳಿಸುವ ಕತೆಯನ್ನು ರಾಜೇಶ್ ಸಿಂಗ್ ಅವರು ಹಂಚಿಕೊಂಡಿದ್ದಾರೆ.
ಈ ಕೆಲಸವನ್ನು ಏಕೆ ಆಯ್ಕೆ ಮಾಡಿಕೊಂಡಿರಿ ಎಂದು ಪ್ರಶ್ನಿಸಿದರೆ, “ಏಕೆಂದರೆ ನಾನು ಇದನ್ನು ಪಡೆಯಲು ಯಶಸ್ವಿಯಾಗಿದ್ದೇನೆ” ಎಂದು ಆತ ಉತ್ತರಿಸಿದ್ದಾರೆ.
ರಾಜೇಶ್ ಮಾಸಿಕ ಉಳಿತಾಯದ ಬಗ್ಗೆ ಮತ್ತಷ್ಟು ವಿಚಾರಿಸಿದಾಗ, ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳಬೇಕು. ಈ ಕಾರಣಕ್ಕಾಗಿ, ಅವರಿಗೆ 8,000 ರೂ.ಗಳನ್ನು ಕಳುಹಿಸುತ್ತಾರೆ ಮತ್ತು ಕೇವಲ 4,000 ರೂ. ಗಳಲ್ಲಿ ಸ್ವತಃ ಜೀವನ ಸಾಗಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಸಂದೀಪ್ ಅವರು ಇನ್ನೂ 20 ಜನರ ಗುಂಪಿನಲ್ಲಿ ಒಟ್ಟಿಗೆ ಇರುತ್ತಾರೆ, ಅದು ಅವರಿಗೆ ಬದುಕಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಕೆಲಸ ಕೊಡಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಸಿಂಗ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.