alex Certify ಕೊರೊನಾದಿಂದ ಶಾಲೆಗಳು ಬಂದ್‌….! ಬಿಹಾರದ ವಿದ್ಯಾರ್ಥಿಗಳೀಗ ಅಕ್ರಮ ಮದ್ಯ ಪೂರೈಕೆದಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಶಾಲೆಗಳು ಬಂದ್‌….! ಬಿಹಾರದ ವಿದ್ಯಾರ್ಥಿಗಳೀಗ ಅಕ್ರಮ ಮದ್ಯ ಪೂರೈಕೆದಾರರು

2016ರ ಏಪ್ರಿಲ್‌ನಲ್ಲಿ ಬಿಹಾರದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಯಿತು. ಮದ್ಯ ಖರೀದಿ ಕೂಡ ಸದ್ಯ ಅಪರಾಧ ಎನಿಸಿದೆ. ಹಾಗಾಗಿ ಮದ್ಯವ್ಯಸನಿಗಳು ಕಳ್ಳಭಟ್ಟಿಗೆ ದಾಸರಾಗಿದ್ದಾರೆ. ಇಂಥ ಕಳ್ಳಭಟ್ಟಿ ಅಡ್ಡೆಗಳಿಂದ ನೂರಾರು ಗ್ರಾಮಸ್ಥರು ಇದುವರೆಗೂ ಸತ್ತಿದ್ದಾರೆ. ಪೊಲೀಸರು ದಾಳಿ ನಡೆಸುತ್ತಲೇ ಇದ್ದಾರೆ. ಆದರೂ ಬಿಹಾರದಲ್ಲಿ ಮದ್ಯವ್ಯಸನಿಗಳಿಗೆ ಅಗತ್ಯ ಮದ್ಯ ಪೂರೈಕೆ ಆಗುತ್ತಲೇ ಇದೆ.

ಮುಜಾಫ್ಫರ್‌ಪುರ, ಸಮಷ್ಟಿಪುರ, ಹಾಜಿಪುರ, ವೈಶಾಲಿ ಜಿಲ್ಲೆಗಳಲ್ಲಿ ಪ್ರೌಢಶಾಲೆಗಳು ಕೊರೊನಾದಿಂದಾಗಿ ಬಂದ್‌ ಆಗಿವೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಕುಟುಂಬಸ್ಥರು ಕೆಲಸಗಳಿಗೆ ಅಟ್ಟುತ್ತಿದ್ದಾರೆ. ಇವರೆಲ್ಲರೂ ಮದ್ಯವ್ಯಸನಿಗಳಿಗೆ ಕದ್ದುಮುಚ್ಚಿ ಮದ್ಯ ಪೂರೈಕೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಪ್ರತಿ ಬಾರಿ ಮನೆಬಾಗಿಲಿಗೆ ಡೆಲಿವರಿ ಮಾಡಿದಾಗ 100 ರೂ. ಹುಡುಗರ ಕಿಸೆಗೆ ಸೇರುತ್ತಿದೆ. ಓದಿಗಿಂತ ಇದೇ ಉತ್ತಮ ಎನಿಸಿ, ಹೆಚ್ಚೆಚ್ಚು ವಿದ್ಯಾರ್ಥಿಗಳು ಶಾಲೆಗಳನ್ನು ಬಿಟ್ಟು, ಕೋಚಿಂಗ್‌ ಕೇಂದ್ರಗಳನ್ನು ತೊರೆದು ಮದ್ಯ ಡೆಲಿವರಿ ಕಾಯಕಕ್ಕೆ ಇಳಿದಿದ್ದಾರೆ.

ಸಮಷ್ಟಿಪುರದ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾರ, ಕುಟುಂಬಸ್ಥರೇ ಮಕ್ಕಳನ್ನು ಅಕ್ರಮ ದಂಧೆಗೆ ನೂಕುತ್ತಿದ್ದಾರೆ. ಹುಡುಗರು ಸಿಕ್ಕಿಬಿದ್ದಾಗ ಗೋಳಾಡುತ್ತ ಪೊಲೀಸ್‌ ಠಾಣೆಗೆ ಬರುತ್ತಾರೆ. ಆ ವೇಳೆ ಮಕ್ಕಳಿಗೆ ಎಚ್ಚರಿಕೆ ಕೊಟ್ಟು ಮನೆಗೆ ಕಳುಹಿಸುವ ಅನಿವಾರ್ಯತೆಯಲ್ಲಿ ಇದ್ದೇವೆ. ಜೈಲಿಗೆ ಅಟ್ಟಿದರೆ, ಮಕ್ಕಳ ಭವಿಷ್ಯ ಹಾಳಾಗುತ್ತದೆ. ಅವರು ದೊಡ್ಡ ಅಪರಾಧಿಗಳಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಳ್ಳತನ ಮಾಡೋಕೆ ಬಂದವನು ದೇವರ ದರ್ಶನವಾಗುತ್ತಿದ್ದಂತೆ ಕೈ ಮುಗಿದು ವಾಪಾಸ್….!

2019-20ನೇ ಶೈಕ್ಷ ಣಿಕ ಸಾಲಿನಲ್ಲಿ 6 ರಿಂದ 8ನೇ ತರಗತಿಯನ್ನು ಒಟ್ಟು 8.9% ವಿದ್ಯಾರ್ಥಿಗಳು ತೊರೆದಿದ್ದಾರೆ. ಅದೇ ರೀತಿ ಬಿಹಾರದಲ್ಲಿ9 ರಿಂದ 10ನೇ ತರಗತಿಗೆ ಗುಡ್‌ಬೈ ಹೇಳಿರುವ ವಿದ್ಯಾರ್ಥಿಗಳ ಸಂಖ್ಯೆ 21.4% ಆಗಿದೆ. ಬಿಹಾರದ ಶಿಕ್ಷಣ ಸಚಿವ ವಿನಯ್‌ ಚೌಧರಿ ಅವರ ವಿರುದ್ಧ ಜನಮಾನಸದಲ್ಲಿ ಭಾರಿ ಅಸಮಾಧಾನವಿದೆ. ಸೂಕ್ತ ಶಿಕ್ಷಣ ನೀತಿ ಮಾರ್ಪಾಡು ಕೂಡಲೇ ಆಗಬೇಕಿದೆ ಎಂದು ಹಲವು ತಜ್ಞರು ಆಗ್ರಹಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...