alex Certify ಆನ್ಲೈನ್ ಕ್ಲಾಸ್ ವೇಳೆ ಪತ್ನಿಗೆ ಮುತ್ತಿಟ್ಟ ಶಿಕ್ಷಕನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಕ್ಲಾಸ್ ವೇಳೆ ಪತ್ನಿಗೆ ಮುತ್ತಿಟ್ಟ ಶಿಕ್ಷಕನ ವಿಡಿಯೋ ವೈರಲ್

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ವರ್ಕ್ ಫ್ರಂ ಹೋಮ್ ಹಾಗೂ ಆನ್ಲೈನ್ ಕ್ಲಾಸ್ ಹೆಚ್ಚಾಗಿದೆ. ಆನ್ಲೈನ್ ಕ್ಲಾಸ್ ಗಳಲ್ಲಿ ಹಾಗೂ ಮೀಟಿಂಗ್ ಗಳಲ್ಲಿ ತಲೆ ತಗ್ಗಿಸುವ ವಿಡಿಯೋಗಳು ವೈರಲ್ ಆದ ಸಾಕಷ್ಟು ಘಟನೆಗಳಿವೆ. ಕೊಲಂಬಿಯಾದಲ್ಲಿ ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಕೊಲಂಬಿಯಾದ ಶಾಲೆಯೊಂದರಲ್ಲಿ ಆನ್ಲೈನ್ ಕ್ಲಾಸ್ ನಡೆಯುತ್ತಿತ್ತು. ಶಿಕ್ಷಕರೊಬ್ಬರು ಮನೆಯಲ್ಲಿ ಕುಳಿತು ಮಕ್ಕಳಿಗೆ ಪಾಠ ಹೇಳ್ತಿದ್ದರು. ಮಕ್ಕಳಿಗೆ ಪಾಠ ಹೇಳಿದ ನಂತ್ರ ಜೂಮ್ ಮೀಟಿಂಗ್ ಸೈಟ್ ಬಂದ್ ಮಾಡಲು ಶಿಕ್ಷಕ ಮರೆತಿದ್ದಾರೆ. ವಿಂಡೋ ಬಂದ್ ಮಾಡದೆ ಅಲ್ಲಿಗೆ ಬಂದ ಪತ್ನಿ ಜೊತೆ ರೋಮ್ಯಾನ್ಸ್ ಶುರು ಮಾಡಿದ್ದಾರೆ. ಮಕ್ಕಳು ಆನ್ಲೈನ್ ನಲ್ಲಿ ಇದ್ದ ಕಾರಣ ಶಿಕ್ಷಕನ ರೋಮ್ಯಾನ್ಸ್ ಕಣ್ಣಿಗೆ ಬಿದ್ದಿದೆ.

ಶಿಕ್ಷಕನಿಗೆ ತಕ್ಷಣ ತಪ್ಪಿನ ಅರಿವಾಗಿದೆ. ವಿಂಡೋ ಬಂದ್ ಮಾಡಿದ್ದಾರೆ. ಆದ್ರೆ ಆಗ್ಲೇ ವಿಡಿಯೋ ರೆಕಾರ್ಡ್ ಆಗಿತ್ತು. ಇದು ಅಕಸ್ಮಿಕವಾಗಿ ನಡೆದ ಘಟನೆ ಎಂದಿರುವ ಶಿಕ್ಷಕ ಕ್ಷಮೆ ಕೇಳಿದ್ದಾರೆ. ಇದೊಂದು ದೊಡ್ಡ ತಪ್ಪು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ಕೆನಡಾದಲ್ಲಿ ಮೀಟಿಂಗ್ ವೇಳೆ ಶರ್ಟ್ ಧರಿಸದೆ ವ್ಯಕ್ತಿಯೊಬ್ಬರು ಕಂಪ್ಯೂಟರ್ ಮುಂದೆ ಬಂದಿದ್ದರು. ಇದನ್ನು ನೋಡಿ ಮೀಟಿಂಗ್ ನಲ್ಲಿದ್ದ ನೌಕರರು ದಂಗಾಗಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...