ಶಾಲೆಯೊಂದರಲ್ಲಿ ಕಲಾ ವಿಭಾಗದ ನಿರ್ದೇಶಕರಾಗಿದ್ದ ಶಿಕ್ಷಕರೊಬ್ಬರು ತಮ್ಮ ಮೇಲೆ ಸ್ಥಳೀಯರ ಗುಂಪೊಂದು ದಾಳಿ ಮಾಡಿದ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೋಯಿಕ್ಕೋಡ್‌ನಲ್ಲಿ ಜರುಗಿದೆ.
ಇಲ್ಲಿನ ವೆಂಗಾರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ನೈತಿಕ ಪೊಲೀಸ್‌ಗಿರಿಯಿಂದಾಗಿ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತರ ಕುಟುಂಬಸ್ಥರು ಹಾಗೂ ಸ್ನೇಹಿತರು ಆಪಾದನೆ ಮಾಡಿದ್ದಾರೆ.
ತನ್ನ ವಿದ್ಯಾರ್ಥಿಯೊಬ್ಬರ ತಾಯಿಯೊಂದಿಗೆ ನಡೆದ ವಾದವೊಂದು ಶಿಕ್ಷಕ ಸುರೇಶ್ ಚಲಿಯಾತ್‌ರ ಸಾವಿಗೆ ಹಾದಿಯಾಗಿದೆ ಎಂದು ವರದಿಗಳು ತಿಳಿಸಿವೆ.
’ಮಗನನ್ನು ನೋಡಿ ಕಲಿಯಿರಿ ಕರೀನಾʼ ಎಂದ ನೆಟ್ಟಿಗರು
ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ವೇಳೆ ತಮ್ಮ ವಿದ್ಯಾರ್ಥಿಯೊಬ್ಬರ ತಾಯಿಯೊಂದಿಗೆ ಸುರೇಶ್ ವಾಗ್ವಾದಕ್ಕಿಳಿದಿದ್ದಾರೆ. ಇದಾದ ಬೆನ್ನಿಗೇ, ಗುರುವಾರ ಬೆಳಿಗ್ಗೆ ಸ್ಥಳೀಯರ ಗುಂಪೊಂದು ಸುರೇಶ್ ಮನೆಗೆ ಧಾವಿಸಿ ಆತ ಹಾಗೂ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಸುರೇಶ್‌ರನ್ನು ಮನೆಯಿಂದ ಹೊರಗೆಳೆದ ಆಪಾದಿತರ ಗುಂಪು, ವಾಹನವೊಂದರಲ್ಲಿ ಕೂರಿಸಿಕೊಂಡು ಆತನಿಗೆ ಇನ್ನಷ್ಟು ಥಳಿಸಿದ್ದಾರೆ.
ಸಮಸ್ಯೆ ಇತ್ಯರ್ಥಪಡಿಸಲು ರಾಜಿಗಾಗಿ ಶುಕ್ರವಾರ ಮತ್ತೊಮ್ಮೆ ಸುರೇಶ್ ರನ್ನು ಕರೆದೊಯ್ದು ಆತನ ಮೇಲೆ ಇನ್ನಷ್ಟು ಹಲ್ಲೆ ಮಾಡಲಾಗಿದೆ ಆ ವೇಳೆ ಆತ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸುರೇಶ್‌ರ ಸ್ನೇಹಿತರೊಬ್ಬರು ತಿಳಿಸಿದ್ದಾರೆ.