alex Certify BIG BREAKING: ರಾಜ್ಯಾದ್ಯಂತ 1 -5 ನೇ ಕ್ಲಾಸ್ ಆರಂಭ, ಖುಷಿಯಿಂದ ಬಂದ ಮಕ್ಕಳು – ಒಂದೂವರೆ ವರ್ಷದ ನಂತರ ಶಾಲೆಗಳಲ್ಲಿ ಕಲರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಾಜ್ಯಾದ್ಯಂತ 1 -5 ನೇ ಕ್ಲಾಸ್ ಆರಂಭ, ಖುಷಿಯಿಂದ ಬಂದ ಮಕ್ಕಳು – ಒಂದೂವರೆ ವರ್ಷದ ನಂತರ ಶಾಲೆಗಳಲ್ಲಿ ಕಲರವ

ಬೆಂಗಳೂರು: ರಾಜ್ಯಾದ್ಯಂತ ಇಂದು ಒಂದರಿಂದ ಐದನೇ ತರಗತಿ ಆರಂಭವಾಗಿವೆ. ಇಷ್ಟು ದಿನ ಮನೆಯಲ್ಲಿದ್ದ ಮಕ್ಕಳು ಶಾಲೆಗೆ ಬಂದಿದ್ದಾರೆ.

ಈಗಾಗಲೇ 6 ರಿಂದ 10 ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಇಂದಿನಿಂದ ಒಂದರಿಂದ ಐದನೇ ತರಗತಿ ಭೌತಿಕ ತರಗತಿಗಳನ್ನು ಮಾರ್ಗಸೂಚಿಗಳ ಪಾಲನೆಯೊಂದಿಗೆ ಆರಂಭಿಸಲಾಗಿದೆ. ಪೋಷಕರ ಒಪ್ಪಿಗೆ ಪತ್ರದೊಂದಿಗೆ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ. ಅರ್ಧ ದಿನ ಶಾಲೆ ನಡೆಯಲಿದ್ದು, ಮುಂದಿನ ವಾರದಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ.

ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಖುಷಿಯಿಂದಲೇ ಶಾಲೆಗೆ ಆಗಮಿಸಿದ್ದಾರೆ. ಶಾಲೆಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಅನಾರೋಗ್ಯದ ಲಕ್ಷಣ ಇರುವ ಮಕ್ಕಳಿಗೆ ಶಾಲೆಗೆ ಪ್ರವೇಶ ಇರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಒಂದೂವರೆ ವರ್ಷದ ನಂತರ ಶಾಲೆ ಪ್ರಾರಂಭವಾಗಿದ್ದು, ಮತ್ತೆ ಮಕ್ಕಳ ಕಲರವ ಕೇಳಿಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...