ಸಾಮಾನ್ಯವಾಗಿ ಶಾಲಾ ವೃತ್ತಪತ್ರಿಕೆಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ತಮ್ಮ ಸ್ಮರಣೀಯ ಕ್ಷಣಗಳನ್ನು ಮೆಲಕು ಹಾಕಲು ನೆರವಾಗುತ್ತವೆ. ಶಾಲೆ ಬಿಟ್ಟ ಬಹಳ ವರ್ಷಗಳ ಬಳಿಕವೂ ಈ ಸುಂದರ ಕ್ಷಣಗಳನ್ನು ಸ್ಮರಿಸಲು ವಿದ್ಯಾರ್ಥಿಗಳು ಈ ಮ್ಯಾಗಜ಼ಿನ್ಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ.
ಆದರೆ ಮಲೇಷ್ಯಾದ ಶಾಲೆಯೊಂದು ತನ್ನ ಮ್ಯಾಗಜ಼ಿನ್ನಲ್ಲಿ ಯಾರೂ ಊಹಿಸಲೂ ಸಾಧ್ಯವಿಲ್ಲದ ವಿಚಾರವೊಂದನ್ನು ಪ್ರಕಟಿಸಿದ್ದು, ಇದೂ ಒಂಥರಾ ’ಮರೆಯಲಾಗದ ನೆನಪೇ’ ಆಗಿದೆ ಎನ್ನಬಹುದಾಗಿದೆ.
ಸರಣಿ ಸರಗಳ್ಳಿಯರ ಅರೆಸ್ಟ್
ಕೋವಿಡ್ ಕಾರಣದಿಂದಾಗಿ ಮನೆಯಿಂದಲೇ ಆನ್ಲೈನ್ ಕ್ಲಾಸ್ಗಳನ್ನು ಅಟೆಂಡ್ ಮಾಡುವ ವಿದ್ಯಾರ್ಥಿಗಳು ಯಾವ ಮಟ್ಟಿಗೆ ಗಮನ ಇಟ್ಟು ಪಾಠ/ಪ್ರವಚನ ಕೇಳುತ್ತಿದ್ದರು ಎಂದು ಸಾಬೀತುಪಡಿಸುವ, ಆನ್ಲೈನ್ ಕ್ಲಾಸ್ಗಳ ಸ್ಕ್ರೀನ್ ಶಾಟ್ ಗಳನ್ನು ಮ್ಯಾಗಜ಼ಿನ್ನಲ್ಲಿ ಮುದ್ರಿಸಿದೆ ಈ ಶಾಲೆ. ಬಹಳಷ್ಟು ವಿದ್ಯಾರ್ಥಿಗಳು ಈ ವೇಳೆ ಕ್ಯಾಮೆರಾ ಆಫ್ ಮಾಡಿಕೊಂಡಿದ್ದು, ಬಹಳಷ್ಟು ಪ್ರಶ್ನೆಗಳು ಏಳುವಂತೆ ಮಾಡಿದೆ.
https://twitter.com/ninomelet_/status/1423170424712536066?ref_src=twsrc%5Etfw%7Ctwcamp%5Etweetembed%7Ctwterm%5E1423170424712536066%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fschool-magazine-prints-screenshots-from-online-classes-as-class-photos-most-students-had-their-cameras-off%2F797257