ಬೆಲೆ ಬಾಳುವ ಈ ಕಾರಿನಲ್ಲಿ ಇರುವ ಐಷಾರಾಮಿ ಸೌಕರ್ಯಕ್ಕೆ ಕೊನೆಯೇ ಇಲ್ಲ. ಉದ್ಯಮಿ ಎಲಾನ್ ಮಸ್ಕ್‌ನ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ವಾಹನ ಪ್ರಪಂಚದ ಕ್ರಾಂತಿಯ ಮುಂಚೂಣಿಯಲ್ಲಿದೆ. ಆದರೆ ಟೆಸ್ಲಾ ಕಾರೊಂದು ಬ್ರೇಕ್ ಫೇಲ್ ಆಗಿ ಇಬ್ಬರು ಶಾಲಾ ಬಾಲಕಿಯರನ್ನು ಬಲಿ ಪಡೆದಿರುವ ಘಟನೆ ಚೀನಾದಲ್ಲಿ ನಡೆದಿದೆ.
ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಚಾಝೌದಲ್ಲಿ ಈ ದುರ್ಘಟನೆ ನಡೆದಿದೆ. ಕಾರಿನ ಚಾಲಕ ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. 2 ಕಿಲೋ ಮೀಟಿರ್ವರೆಗೂ ಕಾರು ನಿಯಂತ್ರಣಕ್ಕೆ ಬಾರದೇ ಇಬ್ಬರು ಮಕ್ಕಳನ್ನು ಬಲಿ ಪಡೆದಿದೆ. ಘಟನೆಯಲ್ಲಿ ಮೂವರಿಗೆ ತೀವ್ರ ಗಾಯಗಳಾಗಿದೆ.
ಕಾರಿನಲ್ಲಿದ್ದ ಕುಟುಂಬವು ಬ್ರೇಕ್ ಫೇಲ್ ಆಯ್ತು ಎಂದು ಹೇಳಿದರೆ, ಟೆಸ್ಲಾ ಕಂಪೆನಿ ಮಾತ್ರ ಕಾರಿನ ಚಾಲಕ ನಶೆಯಲ್ಲಿ ಇದ್ದುದೇ ಕಾರಣ ಎಂದಿದೆ.
ಚಾಲಕ ಇದ್ದಕಿದ್ದ ಹಾಗೇ ಎಕ್ಸ್ಲೆರೇಟರ್ ಮೇಲೆ ಕಾಲಿಟ್ಟಿದ್ದಾನೆ. ಆಗ ವಾಹನದ ಸ್ಪೀಡ್ 100ಕ್ಕೆ ಮುಟ್ಟಿದೆ. ಇಷ್ಟಾದರೂ ಚಾಲಕ ಮಾತ್ರ ಬ್ರೇಕ್ ಹಾಕಿಲ್ಲ. ಆತ ಪಾರ್ಕ್ ಗೇರ್ ಬಟನ್ ಅನ್ನು ನಾಲ್ಕು ಬಾರಿ ಒತ್ತಿದ್ದಾನಂತೆ. ಈ ಸಮಯದಲ್ಲಿ, ಬ್ರೇಕ್ ಲೈಟ್‌ಗಳು ತ್ವರಿತವಾಗಿ ಆನ್ ಮತ್ತು ಆಫ್ ಆಗಿ ಘಟನೆ ಸಂಭವಿಸಿದೆ ಎಂದು ಕಂಪೆನಿ ಹೇಳಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.