alex Certify ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಪುಟ್ಟ ಬಾಲಕನ ಜಾದೂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಪುಟ್ಟ ಬಾಲಕನ ಜಾದೂ…!

ಚಿಕ್ಕ ಮಕ್ಕಳಿದ್ದಾಗ ನಾವು ಕೂಡ ಪೋಷಕರೊಂದಿಗೆ ಕುಳಿತು ಮ್ಯಾಜಿಕ್​ ಶೋಗಳನ್ನು ನೋಡುತ್ತಾ ಇದ್ದುದು ನಿಮಗೆ ನೆನಪಿದ್ದಿರಬಹುದು. ಮ್ಯಾಜಿಕ್​ ಶೋಗಳನ್ನು ನೋಡಿದ ಬಳಿಕ ನಾವು ಕೂಡ ಮ್ಯಾಜಿಷಿಯನ್​ಗಳಂತೆ ಜಾದೂಗಳನ್ನು ಮಾಡಲು ಯತ್ನಿಸಿದ್ದೂ ಸಹ ನಿಮಗೆ ನೆನಪಿದ್ದಿರಬಹುದು. ಎಷ್ಟೇ ಪ್ರಯತ್ನಪಟ್ಟರೂ ಜಾದೂಗಾರನಂತೆ ಜಾದೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಪುಟ್ಟ ಬಾಲಕನೊಬ್ಬ ಜಾದೂ ಪ್ರದರ್ಶಿಸಿದ್ದು ಈ ವಿಡಿಯೋ 128 ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸಿದೆ.

ಈ ಪುಟ್ಟ ಜಾದೂಗಾರ ತನ್ನ ಸಹಪಾಠಿಗಳ ಜೊತೆಯಲ್ಲಿ ಶಾಲೆಯಲ್ಲಿ ಇದ್ದಾಗ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಎರಡು ಪುಟ್ಟ ಕಲ್ಲುಗಳನ್ನು ಕೈಯಲ್ಲಿ ಹಿಡಿದ ಬಾಲಕ ಒಂದೊಂದು ಕೈಯಲ್ಲಿ ಒಂದೊಂದು ಕಲ್ಲುಗಳನ್ನು ಹಿಡಿದುಕೊಂಡಿರುತ್ತಾನೆ. ಕಣ್ಮುಚ್ಚಿ ತೆರೆಯೋಷ್ಟರಲ್ಲಿ ಎರಡೂ ಕೈಯಲ್ಲಿದ್ದ ಕಲ್ಲುಗಳು ಒಂದೇ ಕೈಯಿಗೆ ಬಂದಿರುತ್ತದೆ. ಬಾಲಕನ ಈ ಟ್ಯಾಲೆಂಟ್​ಗೆ ಎಲ್ಲರೂ ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...