alex Certify ಹೂ ಕೊಟ್ಟು ಲವ್ ಪ್ರಪೋಸ್ ಮಾಡಿದ ವಿದ್ಯಾರ್ಥಿ; ಫಸ್ಟ್ ಕ್ರಶ್ ನೆನಪು ಮಾಡಿಸಿದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂ ಕೊಟ್ಟು ಲವ್ ಪ್ರಪೋಸ್ ಮಾಡಿದ ವಿದ್ಯಾರ್ಥಿ; ಫಸ್ಟ್ ಕ್ರಶ್ ನೆನಪು ಮಾಡಿಸಿದ ವಿಡಿಯೋ

ಫ್ರೆಂಡ್‌ಶಿಪ್‌, ಕ್ರಶ್, ಪ್ರಪೋಸ್, ಲವ್ ಇದೆಲ್ಲ ಕಾಲೇಜ್ ಲೈಫಲ್ಲಿ ಕಾಮನ್. ಆದರೆ ಇತ್ತೀಚೆಗೆ ವೈರಲ್ ಆಗಿರೋ ಈ ವಿಡಿಯೋ ನೋಡಿ. ಶಾಕ್ ಆಡಿ ಬಿಡ್ತಿರಾ ! ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಫಸ್ಟ್ ಕ್ರಶ್‌‌ ಗೆ ಪ್ರಪೋಸ್ ಮಾಡಿರೋ ರೀತಿ ಹೇಗಿದೆ ನೋಡಿ.

ಸೋಶಿಯಲ್ ಮೀಡಿಯಾದಲ್ಲಿ ಕ್ಷಣಕ್ಷಣಕ್ಕೂ ವಿಡಿಯೋಗಳು ವೈರಲ್ ಆಗ್ತಾನೇ ಇರುತ್ತೆ. ಅದರಲ್ಲಿ ಕೆಲವು ವಿಡಿಯೋಗಳು ಎಂಟರ್ಟೈನ್ ಆಗಿದ್ರೆ, ಇನ್ನೂ ಕೆಲವು ವಿಡಿಯೋಗಳು ಶಾಕಿಂಗ್ ಆಗಿರುತ್ತೆ. ಆದರೆ ಈಗ ವೈರಲ್ ಆಗಿರೋ ವಿಡಿಯೋ ನಿಮ್ಮ ಹಳೆಯ ಶಾಲಾ ದಿನಗಳನ್ನ ನೆನಪಿಸೋದು ಗ್ಯಾರಂಟಿ.

ಕಾಲೇಜಿನ ದಿನಗಳಲ್ಲಿ ಯುವಕರು ಪ್ರೀತಿ-ಪ್ರೇಮ ಅನ್ನೋದು ಸಾಮಾನ್ಯ. ಹಾಗಂತ ಶಾಲಾ ದಿನಗಳಲ್ಲಿ ಯಾರ ಮೇಲೂ ಪ್ರೀತಿನೇ ಹುಟ್ಟೋದೇ ಇಲ್ಲ ಅಂತ ಅರ್ಥ ಅಲ್ಲ. ಅದಕ್ಕೆ ಪ್ರೀತಿ ಅನ್ನೋದಕ್ಕಿಂತ ಆಕರ್ಷಣೆ ಇಲ್ಲಾ ಕ್ರಶ್‌ ಅನ್ಬಹುದು. ಇಲ್ಲಿ ನೋಡಿ ಈ ಬಾಲಕ ಆ ಹುಡುಗಿಯನ್ನ ಕಂಡು ಆಕರ್ಷಿತನಾಗಿದ್ದಾನೆ. ಅದಕ್ಕೆ ಆತ ತನ್ನ ಬೆನ್ನಹಿಂದೆ ಹೂವುಗಳನ್ನು ಹಿಡಿದುಕೊಂಡು ಹೋಗಿ ಆಕೆಯ ಮುಂದೆ ಮಂಡಿಯೂರಿ ತನ್ನ ಪ್ರೇಮ ಪ್ರಸ್ತಾಪವನ್ನ ಆಕೆಯ ಮುಂದೆ ಇಡುತ್ತಾನೆ. ಆ ವಿದ್ಯಾರ್ಥಿನಿ ನಗ್ತಾ ನಗ್ತಾ ಹೂವನ್ನ ಸ್ವೀಕರಿಸುವುದರ ಮೂಲಕ ಆತನ ಪ್ರೀತಿಯನ್ನ ಒಪ್ಪಿಕೊಳ್ಳುತ್ತಾಳೆ.

ಅಲ್ಲಿರುವ ಉಳಿದ ವಿದ್ಯಾರ್ಥಿಗಳು ಆ ದೃಶ್ಯವನ್ನ ನೋಡಿ ಶಿಳ್ಳೆ ಹೊಡೆಯುವುದು, ಚಪ್ಪಾಳೆ ಹೊಡೆದು ಆ ಒಂದು ಸನ್ನಿವೇಶವನ್ನ ಎಂಜಾಯ್ ಮಾಡುತ್ತಾರೆ. ಇದೇ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರೋ ವಿಡಿಯೋ ಸಿಂಗಲ್ಸ್‌ ಹೊಟ್ಟೆ ಉರಿದುಕೊಳ್ಳುವಂತೆ ಮಾಡಿದೆ. ಈಗ ಅದರದ್ದೇ ಮಿಮ್ಸ್‌ಗಳು ಇನ್ನಷ್ಟು ಹರಿದಾಡ್ತಿವೆ.

https://youtu.be/rJN99XItT0c

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...