alex Certify ಪರ್ವತ ಶ್ರೇಣಿಯಲ್ಲಿ ಮೋಟಾರ್​ ಸೈಕ್ಲಿಸ್ಟ್​ ಸಾಹಸ: ಉಸಿರು ಬಿಗಿ ಹಿಡಿದು ನೋಡುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರ್ವತ ಶ್ರೇಣಿಯಲ್ಲಿ ಮೋಟಾರ್​ ಸೈಕ್ಲಿಸ್ಟ್​ ಸಾಹಸ: ಉಸಿರು ಬಿಗಿ ಹಿಡಿದು ನೋಡುವ ವಿಡಿಯೋ ವೈರಲ್

ಕಾರುಗಳನ್ನು ಚಾಲನೆ ಮಾಡುವುದು ಅಥವಾ ಮೋಟಾರ್‌ಸೈಕಲ್‌ಗಳನ್ನು ಆಫ್-ರೋಡ್‌ನಲ್ಲಿ ಓಡಿಸುವುದು ಕೌಶಲದ ವಿಷಯವಾಗಿದೆ. ಆದರೆ ಕೆಲವರ ಸಾಹಸ ಎಷ್ಟು ಇರುತ್ತದೆ ಎಂದರೆ ನೋಡುಗರು ಬೆಚ್ಚಿಬೀಳುವಂತೆ ಇರುತ್ತದೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

ಇದು ಮೋಟಾರ್ ಸೈಕಲ್ ಸವಾರನ ವಿಡಿಯೋ. ಮೋಟರ್​ಸೈಕ್ಲಿಸ್ಟ್ ಅತ್ಯಂತ ಕಡಿದಾದ, ಜಾರುವ ಪರ್ವತವನ್ನು ಹತ್ತುತ್ತಿರುವುದನ್ನು ವಿಡಿಯೋ ಒಳಗೊಂಡಿದೆ. ಗಮನಿಸಬೇಕಾದ ಸಂಗತಿಯೆಂದರೆ, ಸವಾರನು ಜಾರು ಪರ್ವತದ ಮೇಲೆ ಬೈಕ್ ಅನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ ವೃತ್ತಿಪರ ರೈಡರ್ ಎಂದು ತೋರುತ್ತದೆ.

ಈ ವಿಡಿಯೋ ನೋಡಬೇಕಾದರೆ ನಿಜಕ್ಕೂ ಉಸಿರು ಬಿಗಿ ಹಿಡಿದುಕೊಳ್ಳಬೇಕಿದೆ. ಲೊ+ವೈರಲ್ ಎಂಬ ಹೆಸರಿನ ಖಾತೆಯು ಟ್ವಿಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ, “ಕೆಲವೊಮ್ಮೆ ಅಸಾಧ್ಯವೂ ಸಾಧ್ಯ” ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ. ಟ್ವಿಟರ್‌ನಲ್ಲಿ ಇದನ್ನು ಈಗಾಗಲೇ 3,74,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಸ್ಕೂಟರ್​ ಚಲಾಯಿಸುತ್ತಿರುವವರು ಪರ್ವತದ ಮೇಲೆ ಏರಲು ಪ್ರಾರಂಭಿಸುತ್ತದೆ. ಸ್ಪಷ್ಟವಾಗಿ ಗೋಚರಿಸದಿದ್ದರೂ, ಬೈಕ್ ಸವಾರ ರ್ಯಾಲಿ ಬೈಕ್ ಬಳಸುತ್ತಿರುವಂತೆ ತೋರುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...