ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಭಾವ್ಯ ಸಿಎಂ ಅಭ್ಯರ್ಥಿ ನವಜೋತ್ ಸಿಂಗ್ ಸಿಧು ವಿರುದ್ಧ ಹತ್ಯೆಗೆ ಯತ್ನಿಸಿದ ಪ್ರಕರಣವೊಂದರ ಸಂಬಂಧ 2018ರ ಮೇ 15ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದ 3 ವರ್ಷ ಜೈಲು ಶಿಕ್ಷೆಯ ತೀರ್ಪು ಹೊರಬಿದ್ದಿದೆ.
ಒಬ್ಬ ಹಿರಿಯ ನಾಗರಿಕರಿಗೆ ಗಾಯವುಂಟು ಮಾಡಿ, ಹತ್ಯೆಗೆ ಯತ್ನಿಸಿದ ಗುರುತರ ಆರೋಪ ಸಿಧು ವಿರುದ್ಧ ಇದೆ. ಆದರೆ, ಸಿಧು ಪರ ವಕೀಲರ ಸತತ ಮನವಿ ಮೇರೆಗೆ ಜೈಲು ಶಿಕ್ಷೆಯನ್ನು ರದ್ದುಪಡಿಸಿದ್ದ ಹೈಕೋರ್ಟ್, ತೀರ್ಪು ಪರಿಷ್ಕರಿಸಿ 1000 ರೂ. ದಂಡ ಮಾತ್ರ ವಿಧಿಸಿತ್ತು.
ಈ ಆರೋಪದಲ್ಲಿ ಸಿಧುಗೆ ಜತೆಯಾಗಿದ್ದವರು ಆಪ್ತರಾದ ರೂಪಿಂದರ್ ಸಿಂಗ್ ಸಂಧು. ಸಿಧು ಹಾಗೂ ಸಂಧು ಅವರು ನಡೆಸಿದ್ದ ಹತ್ಯೆಗೆ ಯತ್ನದ ಪ್ರಕರಣವು 32 ವರ್ಷ ಹಳೆಯದ್ದು. ಇದು ನಡೆದಿರುವುದು 1988ರ ಡಿಸೆಂಬರ್‌ನಲ್ಲಿ.
ಬಾಲಿವುಡ್ ಯುವ ಜೋಡಿಯ ಪ್ರೇಮ್ ಕಹಾನಿ…! ಅಧಿಕೃತವಾಯ್ತಾ ಅನನ್ಯಾ-ಇಶಾನ್ ಲವ್ ಸ್ಟೋರಿ..?
ಆದರೆ, ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಯಾಕೆಂದರೆ, ಸಿಧು ವಿರುದ್ಧ ಜೈಲು ಶಿಕ್ಷೆ ರದ್ದುಪಡಿಸುವ ಹೈಕೋರ್ಟ್ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಇದನ್ನು ಮಾನ್ಯ ಕೂಡ ಮಾಡಿರುವ ಸುಪ್ರೀಂಕೋರ್ಟ್‌ನ ನ್ಯಾ.ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾ. ಎಸ್.ಕೆ. ಕೌಲ್ ಅವರಿದ್ದ ನ್ಯಾಯಪೀಠವು ಸಿಧು ಅವರಿಂದ ಹತ್ಯೆಗೆ ಗುರಿಯಾಗಬೇಕಿದ್ದ ಹಿರಿಯ ನಾಗರಿಕರ ಪರವಾದ ಕುಟುಂಬಸ್ಥರ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದೆ.
ಈ ಅರ್ಜಿಯ ವಿಚಾರಣೆಯು ಗುರುವಾರ ನಡೆಯಿತು. ಹಿರಿಯ ಕಾಂಗ್ರೆಸ್ಸಿಗ ಮತ್ತು ವಕೀಲ ಪಿ. ಚಿದಂಬರಂ ಅವರು ಸಿಧು ಪರವಾಗಿ ವಾದಿಸಿದರು. ಅವರ ಮನವಿ ಮೇರೆಗೆ ಸುಪ್ರೀಂಕೋರ್ಟ್ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿದೆ.
ಫೆ.20ರಂದು ಪಂಜಾಬಿನಲ್ಲಿ ವಿಧಾನಸಭೆ ಚುನಾವಣೆಯ ಮತದಾನ ನಡೆಯಲಿದೆ. ಹಾಲಿ ಸಿಎಂ ಚರಣ್‌ಜೀತ್ ಸಿಂಗ್ ಚನ್ನಿ ಮತ್ತು ಸಿಧು ನಡುವೆ ಭವಿಷ್ಯದ ಸಿಎಂ ಹುದ್ದೆ ಅಲಂಕರಿಸಲು ಪ್ರಬಲ ಪೈಪೋಟಿ ಇದೆ.