alex Certify ಬಾಲಿವುಡ್ ಯುವ ಜೋಡಿಯ ಪ್ರೇಮ್ ಕಹಾನಿ…! ಅಧಿಕೃತವಾಯ್ತಾ ಅನನ್ಯಾ-ಇಶಾನ್ ಲವ್ ಸ್ಟೋರಿ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಯುವ ಜೋಡಿಯ ಪ್ರೇಮ್ ಕಹಾನಿ…! ಅಧಿಕೃತವಾಯ್ತಾ ಅನನ್ಯಾ-ಇಶಾನ್ ಲವ್ ಸ್ಟೋರಿ..?

ನಟಿ ಅನನ್ಯಾ ಪಾಂಡೆ ತನ್ನ ಇತ್ತೀಚಿನ ಫೋಟೋಶೂಟ್‌ನಿಂದ ಕೆಲ ಸ್ಟನ್ನಿಂಗ್ ಪಿಕ್ಚರ್ಸ್ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸದ್ದು ಮಾಡ್ತಿರೊ ಈ ಚಿತ್ರಗಳಿಗೆ ಬಂದಿರೊ ಕಾಮೆಂಟ್ಸ್ ಕೂಡ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.

ಈ ಸಿಜ್ಲಿಂಗ್ ಫೋಟೋಗಳಲ್ಲಿ, ಅನನ್ಯಾ ಪಾಂಡೆ ತಿಳಿ ನೀಲಿ ಬಣ್ಣದ ಡೆನಿಮ್ ಕ್ರಾಪ್ ಟಾಪ್, ಜೊತೆಗೆ ಪ್ಯಾಂಟ್ ಮತ್ತು ಜಾಕೆಟ್ ಧರಿಸಿದ್ದಾರೆ. ನೋ ಮೇಕ್ಅಪ್ ಲುಕ್ ನೊಂದಿಗೆ, ಓಪನ್ ಹೇರ್ ನಲ್ಲಿ ಸಖತ್ ಮಿಂಚುತ್ತಿರುವ ಅನನ್ಯ ಬ್ಲೂ ಜೀನ್ ಬೇಬಿ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಆದ್ರೆ ವಿಷಯ ಇದಷ್ಟೇ ಅಲ್ಲಾ, ಈ ಪೋಸ್ಟ್‌ನ ಕಾಮೆಂಟ್ ಬಾಕ್ಸ್ ನಲ್ಲಿ ಅನನ್ಯಾ ರೂಮರ್ಡ್ ಬಾಯ್ ಫ್ರೆಂಡ್ ಆಗಿರುವ ಇಶಾನ್ ಕಟ್ಟರ್ ಮಾಡಿರುವ ಕಾಮೆಂಟ್. ಅದಕ್ಕೆ ಅನನ್ಯಾ ರಿಪ್ಲೈ ಕೂಡ ಮಾಡಿದ್ದು, ಇವರಿಬ್ಬರ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಇಬ್ಬರು ತಮ್ಮ ಪ್ರೀತಿಯನ್ನ ಒಪ್ಪಿಕೊಂಡಿದ್ದಾರೆ ಅನ್ನೋ ಮಟ್ಟಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

BIG NEWS: ಹಿಜಾಬ್ ಧರಿಸಿ ಪೋಷಕರೊಂದಿಗೆ ಬಂದ ವಿದ್ಯಾರ್ಥಿಗಳು; ಮತ್ತೆ ತಡೆಯೊಡ್ದಿದ ಕಾಲೇಜು; ಪ್ರತಿಭಟಿಸಿದರೆ FIR ದಾಖಲಿಸುವ ಎಚ್ಚರಿಕೆ

ಹೊಸ ವರ್ಷದ ಆಚರಣೆಗಾಗಿ, ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ಕೊಟ್ಟ ನಂತರ ಹೆಡ್ಲೈನ್ಸ್ ನಲ್ಲಿರುವ ಜೋಡಿ ಮತ್ತೆ ಸುದ್ದಿಯಾಗುತ್ತಿದ್ದಾರೆ. ಇಬ್ಬರೂ ರಜೆಯ ಸಮಯದಲ್ಲಿ ಒಟ್ಟಿಗೆ ಇರುವ ಯಾವುದೇ ಚಿತ್ರಗಳನ್ನು ಹಂಚಿಕೊಳ್ಳಲಿಲ್ಲವಾದರು, ಅವರು ರಾಜಸ್ಥಾನದಿಂದ ಹಿಂದಿರುಗಿದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...