alex Certify ಗಣ್ಯರ ಮೇಲೆ ಬೇಹುಗಾರಿಕೆಗೆ ಪೆಗಾಸಸ್: ‘ಸುಪ್ರೀಂ’ ಸಮಿತಿ ವರದಿಯಲ್ಲಿ ಮಹತ್ವದ ಮಾಹಿತಿ: ಸಹಕರಿಸದ ಸರ್ಕಾರ, 5 ಫೋನ್ ಗಳಲ್ಲಿ ಮಾಲ್‌ವೇರ್ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣ್ಯರ ಮೇಲೆ ಬೇಹುಗಾರಿಕೆಗೆ ಪೆಗಾಸಸ್: ‘ಸುಪ್ರೀಂ’ ಸಮಿತಿ ವರದಿಯಲ್ಲಿ ಮಹತ್ವದ ಮಾಹಿತಿ: ಸಹಕರಿಸದ ಸರ್ಕಾರ, 5 ಫೋನ್ ಗಳಲ್ಲಿ ಮಾಲ್‌ವೇರ್ ಪತ್ತೆ

ಪೆಗಾಸಸ್ ಸ್ಪೈವೇರ್ ಬಳಸಿ ಗಣ್ಯರ ಫೋನ್ ಕದ್ದಾಲಿಕೆ, ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿಯಿಂದ ವರದಿ ಸಲ್ಲಿಸಲಾಗಿದೆ.

29 ಫೋನ್ ಗಳಲ್ಲಿ 5 ಫೋನ್ ಗಳಲ್ಲಿ ಮಾತ್ರ ಮಾಲ್ವೇರ್ ಪತ್ತೆಯಾಗಿದೆ. ಆದರೆ, ಅದು ಪೆಗಾಸಸ್ ಮಾಲ್ವೇರ್ ಎಂದು ದೃಢಪಟ್ಟಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ. ತಜ್ಞರ ಸಮಿತಿಗೆ ಕೇಂದ್ರ ಸರ್ಕಾರ ಸಹಕಾರ ನೀಡಿಲ್ಲ ಎಂದು ಸಿಜೆ ರರಮಣ ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿ 29 ಫೋನ್ ಗಳನ್ನು ಪರೀಕ್ಷಿಸಿದೆ. ಫೋನ್ ಪರೀಕ್ಷೆಗೆ ನೀಡಿದ್ದ 29 ಜನರ ಪೈಕಿ ಕೆಲವರು ವರದಿ ಬಿಡುಗಡೆ ಮಾಡದಂತೆ ಮನವಿ ಮಾಡಿದ್ದಾರೆ. ಹೀಗಾಗಿ ಭಾಗಶಃ ವರದಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ನ್ಯಾಯಮೂರ್ತಿ ರವೀಂದ್ರನ್ ವರದಿಯನ್ನು ಸುಪ್ರೀಂ ಕೋರ್ಟ್ ವೆಬ್ಸೈಟ್ ಗೆ ಅಪ್ಲೋಡ್ ಮಾಡಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ವಿಶೇಷ ಸುಪ್ರೀಂ ಕೋರ್ಟ್ ಪೀಠ ಗುರುವಾರ ಪೆಗಾಸಸ್ ಸ್ಪೈವೇರ್ ಬಳಸಿ ಅಕ್ರಮ ಕಣ್ಗಾವಲು ಆರೋಪದ ಕುರಿತು ತನಿಖೆ ನಡೆಸಿದ 3 ಸದಸ್ಯರ ಸ್ವತಂತ್ರ ಸಮಿತಿಯು ಸಲ್ಲಿಸಿದ ವರದಿಯ ಫಲಿತಾಂಶಗಳನ್ನು ಪರಿಶೀಲಿಸಿದೆ.

ಪತ್ರಕರ್ತರು, ಸಂಸದರು, ಪ್ರಮುಖ ನಾಗರಿಕರು ಮತ್ತು ನ್ಯಾಯಾಲಯದ ಸಿಬ್ಬಂದಿಗಳ ಮೇಲೆ ಕಣ್ಣಿಡಲು ಸರ್ಕಾರವು ಇಸ್ರೇಲಿ ಮಿಲಿಟರಿ-ದರ್ಜೆಯ ಮಾಲ್‌ವೇರ್ ಅನ್ನು ಬಳಸಿದೆ ಎಂಬ ವರದಿಗಳನ್ನು ವಿಚಾರಣೆ ಮಾಡಲು ಪೆಗಾಸಸ್ ಸ್ನೂಪಿಂಗ್ ಪ್ರಕರಣದಲ್ಲಿ SC ಯಿಂದ ತಾಂತ್ರಿಕ ಸಮಿತಿ ರಚಿಸಲಾಗಿತ್ತು.

ಸಿಜೆಐ ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಗುರುವಾರ ತಜ್ಞರ ಸಮಿತಿಯು ಸಲ್ಲಿಸಿದ ಸೀಲ್ಡ್ ಕವರ್ ವರದಿ ದಾಖಲಿಸಿದೆ.

ತಾಂತ್ರಿಕ ಸಮಿತಿಯು 29 ಫೋನ್‌ಗಳನ್ನು ಪರಿಶೀಲಿಸಿದೆ. ತಾಂತ್ರಿಕ ಸಮಿತಿಯು ಐದು ಫೋನ್‌ಗಳಲ್ಲಿ ಕೆಲವು ಮಾಲ್‌ವೇರ್‌ಗಳು ಕಂಡುಬಂದಿವೆ, ಇದು ಪೆಗಾಸಸ್‌ ನದೇ ಎಂದು ನಿರ್ಣಾಯಕವಾಗಿಲ್ಲ. ಪೆಗಾಸಸ್ ತನಿಖೆಯಲ್ಲಿ ಭಾರತ ಸರ್ಕಾರವು ಸಹಕರಿಸಿಲ್ಲ ಎಂದು ಎಸ್‌ಸಿ ನೇಮಿಸಿದ ಸಮಿತಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...