ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರಿಗೆ ಮಹತ್ವದ ಸುದ್ದಿಯೊಂದಿದೆ. ಎಸ್‌ಬಿಐ ತನ್ನ ಬ್ಯಾಂಕಿಂಗ್ ಅಪ್ಲಿಕೇಶನ್ ಯೋನೊಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈ ಬದಲಾವಣೆಯ ನಂತರ ಎಸ್‌ಬಿಐನ ಆನ್‌ಲೈನ್ ಬ್ಯಾಂಕಿಂಗ್ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದೆ.
ಎಸ್ಬಿಐ ಈ ಬಗ್ಗೆ ಟ್ವೀಟ್ ಮಾಡಿದೆ. ಯೋನೊ ಅಪ್ಲಿಕೇಷನ್ ಡೌನ್ಲೋಡ್ ಮಾಡಿ. ಅದಕ್ಕೆ ಹೊಸ ವೈಶಿಷ್ಟ್ಯ ಸಿಮ್ ಬೈಂಡಿಂಗ್ ಸೇರಿಸಲಾಗಿದೆ ಎಂದು ಟ್ವೀಟರ್ ನಲ್ಲಿ ಹೇಳಲಾಗಿದೆ. ಇದು ಹೊಸ ತಂತ್ರಜ್ಞಾನವಾಗಿದೆ. ನೋಂದಾಯಿತ ಮೊಬೈಲ್‌ನಿಂದ ಕೇವಲ ಒಂದು ಸಾಧನಕ್ಕೆ ಲಾಗ್-ಇನ್ ಮಾಡಬಹುದು. ಬೇರೆ ಯಾವುದೇ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡಲು ಸಾಧ್ಯವಿಲ್ಲ. ನೋಂದಾಯಿತ ಮೊಬೈಲ್ ಸಂಖ್ಯೆಯ ಸಿಮ್ ಇರುವ ಫೋನ್‌ನಲ್ಲಿ ಮಾತ್ರ ಲಾಗಿನ್ ಆಗಬಹುದು. ಬೇರೆ ಯಾವುದೇ ಫೋನ್‌ನಿಂದ ಅಪ್ಲಿಕೇಶನ್‌ಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.
ಈ ವೈಶಿಷ್ಟ್ಯದೊಂದಿಗೆ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯವು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಗ್ರಾಹಕರು ತಮ್ಮ ಯೋನೊ ಅಪ್ಲಿಕೇಶನ್ ನವೀಕರಿಸಬೇಕಾಗುತ್ತದೆ. ಇದರಲ್ಲಿ ಗ್ರಾಹಕರು ಯೋನೊ ಲೈಟ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಎಸ್‌ಬಿಐ ತಿಳಿಸಿದೆ.
ಆಂಡ್ರಾಯ್ಡ್ ಬಳಕೆದಾರರು ಪ್ಲೇ ಸ್ಟೋರ್‌ನಿಂದ ಎಸ್‌ಬಿಐ ಯೋನೊ ಲೈಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.