alex Certify ಈ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದ್ದೀರಾ…? ಹಾಗಾದ್ರೆ ಅಪ್‍ಡೇಟ್ ಮಾಡಿ ಈ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದ್ದೀರಾ…? ಹಾಗಾದ್ರೆ ಅಪ್‍ಡೇಟ್ ಮಾಡಿ ಈ ದಾಖಲೆ

SBI, HDFC and Other Bank Services to Stop if you do not Update These Documents Soon

ಸೆಪ್ಟೆಂಬರ್ ತಿಂಗಳು ಹಣದ ವಹಿವಾಟಿನ ದೃಷ್ಟಿಯಲ್ಲಿ ಬಹಳ ಪ್ರಮುಖವಾಗಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಸೂಚನೆಯಂತೆ ಹಣದ ವ್ಯವಹಾರದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ ಬ್ಯಾಂಕ್ ಖಾತೆಗಳ ವಿವರಗಳನ್ನು ಗ್ರಾಹಕರು ಅಪ್‍ಡೇಟ್ ಮಾಡಲೇಬೇಕಿದೆ.

ಬಹುಮುಖ್ಯವಾಗಿ ಡೆಬಿಟ್/ಕ್ರೆಡಿಟ್ ಕಾರ್ಡ್‍ಗಳಲ್ಲಿ ಸೂಕ್ತ ಹಾಗೂ ಚಾಲನೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡುವುದು. ಆ ಮೂಲಕ ಪ್ರತಿ ವಹಿವಾಟಿನ ಮಾಹಿತಿಯನ್ನು ಎಸ್‍ಎಂಎಸ್ ಮೂಲಕ ಪಡೆಯುವುದಾಗಿದೆ.

ಇದಲ್ಲದೆ, ಸೆ. 30ರೊಳಗೆ ಆಧಾರ್ ಕಾರ್ಡ್ ಸಂಖ್ಯೆಗೆ ಬ್ಯಾಂಕ್‍ನ ಗ್ರಾಹಕರ ಪ್ಯಾನ್ ಸಂಖ್ಯೆ ಜೋಡಣೆ ಆಗಿರಲೇಬೇಕು. ಸರಕಾರದ ಈ ನಿರ್ಧಾರಕ್ಕೆ ಬ್ಯಾಂಕ್‍ಗಳು ಕೂಡ ಧ್ವನಿಗೂಡಿಸಿ, ಗ್ರಾಹಕರಿಗೆ ಗಡುವು ನೀಡಿವೆ.

BIG NEWS: ಡಿ.ಕೆ.ಶಿವಕುಮಾರ್ ವಿಫಲ ಅಧ್ಯಕ್ಷ ಎಂಬುದು ಸಾಬೀತು; ಕಾಂಗ್ರೆಸ್ ಒಳಜಗಳ ಬಯಲಾಗಿದೆ; ಬಿಜೆಪಿ ರಾಜ್ಯಾಧ್ಯಕ್ಷ್ ವಾಗ್ದಾಳಿ

ಎಸ್‍ಬಿಐ, ಎಚ್‍ಡಿಎಫ್‍ಸಿ, ಆಕ್ಸಿಸ್ ಹಾಗೂ ಇತರ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಪ್ಪದೆಯೇ ತಮ್ಮ ಆಧಾರ್-ಪ್ಯಾನ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ, ಸೆ. 30ರ ನಂತರ ಬ್ಯಾಂಕ್ ಸೇವೆಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಿಬೇಕಾದೀತು.

ಪ್ಯಾನ್ ಸಂಖ್ಯೆ ಸರಿ ಇಲ್ಲ ಎಂದು ಪರಿಗಣಿಸಿ, ಖಾತೆಯಿಂದ ವಹಿವಾಟು ನಡೆಸಲು ಅನಾನುಕೂಲ ಉಂಟಾಗಬಹುದು ಎಂದು ಬ್ಯಾಂಕ್ ವೊಂದರ ಹಿರಿಯ ಅಧಿಕಾರಿಯೊಬ್ಬರು ಮುನ್ನೆಚ್ಚರಿಕೆ ಕೊಟ್ಟಿದ್ದಾರೆ.

ಆದಾಯ ತೆರಿಗೆ ಇಲಾಖೆ ‘ಇ-ಫೈಲಿಂಗ್’ ವೆಬ್‍ಸೈಟ್‍ಗೆ ಭೇಟಿ ನೀಡಿ, ಆಧಾರ್ ಲಿಂಕ್ ವಿಭಾಗಕ್ಕೆ ಹೋಗಬೇಕು. ಅಲ್ಲಿ ಪ್ಯಾನ್ ಸಂಖ್ಯೆ-ಆಧಾರ್ ಸಂಖ್ಯೆ ನಮೂದಿಸಿ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...