ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30ರೊಳಗೆ ತನ್ನೆಲ್ಲಾ ಗ್ರಾಹಕರು ತಮ್ಮ ಖಾತೆಗಳೊಂದಿಗೆ ಆಧಾರ್ ಲಿಂಕ್ ಆಗಿರುವ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಸೂಚಿಸಿದೆ.
ಪಾನ್-ಆಧಾರ್ ಲಿಂಕಿಂಗ್‌ಗೆ ಇದ್ದ ಡೆಡ್ಲೈನ್ ಅನ್ನು ಜೂನ್ 30, 2021ರಿಂದ ಸೆಪ್ಟೆಂಬರ್ 30, 2021ರವರೆಗೆ ವಿಸ್ತರಿಸಲಾಗಿದೆ. ಇದಕ್ಕೂ ಮುನ್ನ ಇದೇ ವಿಚಾರವಾಗಿ ಡೆಡ್ಲೈನ್ ಅನ್ನು ಮೂರು ಬಾರಿ ವಿಸ್ತರಿಸಲಾಗಿದೆ.
BIG NEWS: ಕೊನೆಗೂ ಪಾರ್ಲಿಮೆಂಟ್ ನಲ್ಲಿ ಪೆಗಾಸಸ್ ಬಗ್ಗೆ ಮೌನ ಮುರಿದ ಮೋದಿ ಸರ್ಕಾರ
ಒಂದು ವೇಳೆ ನಿಮ್ಮ ಪಾನ್‌ಗೆ ಆಧಾರ್ ಲಿಂಕಿಂಗ್ ಅದಾಗಲೇ ಆಗಿದೆ ಎನಿಸಿದರೆ https://eportal.incometax.gov.in/iec/foservices/#/pre-login/bl-link-aadhaar ಲಿಂಕ್‌ಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿಕೊಳ್ಳಿ.
ಪಾನ್ ಹಾಗೂ ಆಧಾರ್ ಲಿಂಕಿಂಗ್ ಮಾಡಬೇಕಿದ್ದಲ್ಲಿ ಮೊದಲಿಗೆ ನೀವು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮ್ಮನ್ನು ನೀವು ನೋಂದಣಿ ಮಾಡಿಕೊಳ್ಳಬೇಕು.