
ಎಸ್‌ಎಂಎಸ್ ಮೂಲಕ ಎಸ್‌ಬಿಐ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ?
ನಿಮ್ಮ ಕಾರ್ಡ್ ಕಳುವಾಗಿದ್ದಲ್ಲಿ ಅಥವಾ ನೀವು ಮಾಡದೇ ಇರುವ ವ್ಯವಹಾರದ ಅಲರ್ಟ್ ನಿಮಗೆ ಬಂದಲ್ಲಿ ನೀವು ಕೂಡಲೇ ಕಾರ್ಡ್ ಬ್ಲಾಕ್ ಮಾಡಬಹುದಾಗಿದೆ.
SBI ಗ್ರಾಹಕರಿಗೆ ಮಹತ್ವದ ಸುದ್ದಿ..! ನಿಯಮ ಬದಲಿಸಿದ ಬ್ಯಾಂಕ್
ನಿಮ್ಮ ಕಾರ್ಡ್ ಬ್ಲಾಕ್ ಮಾಡಲು BLOCK ನಿಮ್ಮ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಸಂಖ್ಯೆಯ ಕೊನೆಯ 4 ಅಂಕಿಗಳು ಟೈಪ್ ಮಾಡಿ 5676791ಕ್ಕೆ ಸೆಂಡ್ ಮಾಡಿ. ಅಧವಾ ಎಸ್‌ಬಿಐ ಸಹಾಯವಾಣಿ 18601801290/39020202 ಸಂಖ್ಯೆಗೆ ಸ್ಥಳೀಯ ಎಸ್‌ಟಿಡಿ ಕೋಡ್ ಸೇರಿಸಿ ಡಯಲ್ ಮಾಡಿ.
ನಿಮ್ಮ ಮನವಿಯಂತೆ ಕಾರ್ಡ್ ಬ್ಲಾಕ್ ಆದ ಕೂಡಲೇ ಖಾತ್ರಿಯ ಸಂದೇಶವು ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಗೆ ಎಸ್‌ಎಂಎಸ್ ರೂಪದಲ್ಲಿ ಹಾಗೂ ಇ-ಮೇಲ್‌ನಲ್ಲಿ ತಲುಪಲಿದೆ.
ಒಂದು ವೇಳೆ ನಿಮಗೆ ಖಾತ್ರಿ ಸಂದೇಶ ಬರದೇ ಇದ್ದಲ್ಲಿ ಎಸ್‌ಬಿಐ ಕಾರ್ಡ್ ಸಹಾಯವಾಣಿ 39 02 02 02 (ಸ್ಥಳೀಯ ಕೋಡ್‌ನೊಂದಿಗೆ) ಅಥವಾ 1860 180 1290 ಕರೆ ಮಾಡಬಹುದಾಗಿದೆ.