alex Certify SBI Alert: ಈ ಎರಡು ದಿನ ಬ್ಯಾಂಕ್‌ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI Alert: ಈ ಎರಡು ದಿನ ಬ್ಯಾಂಕ್‌ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ದೇಶಾದ್ಯಂತ ಖಾಸಗಿ ಹಾಗೂ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲಿರುವ ಕಾರಣ ಡಿಸೆಂಬರ್‌ 16 ಮತ್ತು 17ರಂದು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಬ್ಯಾಂಕ್ ಸಂಘಟನೆಗಳ ಒಕ್ಕೂಟ (ಯುಎಫ್‌ಬಿಯು) ಬ್ಯಾಂಕುಗಳ ಖಾಸಗೀಕರಣ ಮಾಡುವ ಸರ್ಕಾರದ ನಡೆಯ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ.

ಡಿಸೆಂಬರ್‌ 10 ರಂದು ಎಸ್‌ಬಿಐ ಮಾಡಿದ ಎಕ್ಸ್‌ಚೇಂಜ್ ಫೈಲಿಂಗ್‌ ಪ್ರಕಾರ, “ಬ್ಯಾಂಕ್ ಸಂಘಟನೆಗಳ ಒಕ್ಕೂಟ ಪ್ರತಿಭಟನೆಗೆ ಕರೆದಿದೆ ಎಂದು ನಮಗೆ ಭಾರತೀಯ ಬ್ಯಾಂಕುಗಳ ಒಕ್ಕೂಟದಿಂದ ಸಲಹೆ ಬಂದಿದ್ದು, ಯುಎಫ್‌ಬಿಯು ಸದಸ್ಯ ಒಕ್ಕೂಟಗಳೆಲ್ಲವೂ ಡಿಸೆಂಬರ್‌ 16 & 17ರಂದು ದೇಶಾದ್ಯಂತ ಪ್ರತಿಭಟನೆಗೆ ಮುಂದಾಗಲಿವೆ ಎಂದು ತಿಳಿಸಲಾಗಿದೆ. ಪ್ರತಿಭಟನೆಯ ದಿನಗಳಂದು ಬ್ಯಾಂಕಿನ ಶಾಖೆಗಳು ಹಾಗೂ ಕಾರ್ಯಾಲಯಗಳಲ್ಲಿ ಸಾಮಾನ್ಯವಾಗಿ ಕೆಲಸ ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯಾದರೂ, ಪ್ರತಿಭಟನೆಯಿಂದ ನಮ್ಮ ಬ್ಯಾಂಕ್‌ನ ಕೆಲಸದ ಮೇಲೆ ಪರಿಣಾಮವಾಗಬಹುದು,” ಎಂದು ತಿಳಿಸಲಾಗಿದೆ.

‘ನಾಟು ನಾಟು’ ಹಾಡಿಗೆ ಕುಣಿದು ಕುಪ್ಪಳಿಸಿದ ಫ್ರೆಂಚ್ ವ್ಯಕ್ತಿ….! ವಿಡಿಯೋ ವೈರಲ್

ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾದರೆ, ಭಾರತೀಯ ಆರ್ಥಿಕತೆಗೆ ಪೆಟ್ಟು ಬಿದ್ದು, ಗ್ರಾಮೀಣ ಪ್ರದೇಶಗಳಲ್ಲಿರುವ ಸ್ವಸಹಾಯ ಗುಂಪುಗಳಿಗೆ ಹಣದ ಹರಿವು ನಿಂತುಬಿಡುವ ಭಯವನ್ನು ಬ್ಯಾಂಕ್ ಸಂಘಟನೆಗಳು ವ್ಯಕ್ತಪಡಿಸಿವೆ.

”ದೇಶದ ಬ್ಯಾಂಕುಗಳಲ್ಲಿರುವ ಒಟ್ಟಾರೆ ಠೇವಣಿಯ 70%ನಷ್ಟನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೇ ಹೊಂದಿವೆ. ಇವುಗಳನ್ನು ಖಾಸಗಿಕರಣಗೊಳಿಸಿದಲ್ಲಿ, ಬ್ಯಾಂಕುಗಳಲ್ಲಿರುವ ಸಾಮಾನ್ಯ ಜನರ ದುಡ್ಡು ಅನಿಶ್ಚಿತತೆಗೆ ಸಿಲುಕಲಿವೆ,” ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಮಹಾ ಕಾರ್ಯದರ್ಶಿ ಸಂಜಯ್ ದಾಸ್ ತಿಳಿಸಿದ್ದಾರೆ.

2021-22ರ ಕೇಂದ್ರ ಬಜೆಟ್ ಘೋಷಣೆ ವೇಳೆ ಮಾತನಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾರ್ವಜನಿಕ ಸ್ವಾಮ್ಯದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ತಿಳಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...