alex Certify ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: SBI ನಿಂದ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: SBI ನಿಂದ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಇಂದಿನಿಂದ 1226 ಖಾಲಿ ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಖಾಲಿ ಇರುವ 1226 ಹುದ್ದೆಗಳಿಗೆ ಅಧಿಕೃತ ವೆಬ್​ಸೈಟ್​ sbi.co.inನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಎಸ್​.ಬಿ.ಐ. ಸಿಓ ನೇಮಕಾತಿಯು ಮೂರು ಹಂತಗಳಲ್ಲಿ ನಡೆಯಲಿದೆ. ಆನ್​ಲೈನ್​ ಲಿಖಿತ ಪರೀಕ್ಷೆ, ಸ್ಕ್ರೀನಿಂಗ್​ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತೆ. ಅಭ್ಯರ್ಥಿಗಳನ್ನು ಮೆರಿಟ್​ ಆಧಾರದ ಮೇಲೆ ಶಾರ್ಟ್​ಲಿಸ್ಟ್​ ಮಾಡಲಾಗುತ್ತದೆ.

ಸಿಬಿಒಗೆ ನೋಂದಣಿ ಮಾಡಲು ಕೊನೆಯ ದಿನಾಂಕ – ಡಿಸೆಂಬರ್​ 29, 2021

ಆನ್​​ಲೈನ್​​ ಶುಲ್ಕ ಪಾವತಿ – ಡಿಸೆಂಬರ್​ 9- 26, 2021

ಅಪ್ಲಿಕೇಶನ್​ ಎಡಿಟ್​ ಮಾಡಲು ಕೊನೆಯ ದಿನಾಂಕ – ಡಿಸೆಂಬರ್​ 29, 2021

ಅಪ್ಲಿಕೇಶನ್​ ಪ್ರಿಂಟ್ ಮಾಡಲು ಕೊನೆಯ ದಿನಾಂಕ – ಜನವರಿ 13, 2022

SBI CBO ಪ್ರವೇಶ ಕಾರ್ಡ್- ಜನವರಿ 12, 2022 (ತಾತ್ಕಾಲಿಕ)

ಎಸ್.​ಬಿ.ಐ. ಸಿಬಿಇ ಪರೀಕ್ಷಾ ದಿನಾಂಕ – ಇನ್ನೂ ಘೋಷಣೆಯಾಗಿಲ್ಲ

ವಯಸ್ಸಿನ ಮಿತಿ:

21 ವರ್ಷದೊಳಗಿನ ಹಾಗೂ 30 ವರ್ಷ ಮೀರಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ. ಅಂದರೆ 01-12-2000 ದ ನಂತರ ಹಾಗೂ 02-12-1991 ಕ್ಕೂ ಮೊದಲು ಜನಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ ( ಈ ದಿನಾಂಕದಂದು ಜನಿಸಿದವರು ಅರ್ಜಿ ಸಲ್ಲಿಸಬಹುದು)

ವೇತನ ಶ್ರೇಣಿ:

ಈ ಹುದ್ದೆಗೆ ಆಯ್ಕೆಯಾದವರಿಗೆ ಮೂಲ ವೇತನ ಸರಿ ಸುಮಾರು 36 ಸಾವಿರ ರೂಪಾಯಿವರೆಗೆ ಇರಬಹುದು ಎಂದು ಹೇಳಬಹುದು. ಪ್ರತಿ ವರ್ಷದಲ್ಲಿ 1 ಬಾರಿ ಸಂಬಳ ಏರಿಕೆಯಾಗಲಿದೆ ಎಂದು ಎಸ್.​ಬಿ.ಐ. ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...