alex Certify SBI alert​: ಫೋನ್‌ ನಲ್ಲೇ ಲಭ್ಯವಾಗುತ್ತೆ ಈ ಐದು ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI alert​: ಫೋನ್‌ ನಲ್ಲೇ ಲಭ್ಯವಾಗುತ್ತೆ ಈ ಐದು ಸೇವೆ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಗ್ರಾಹಕರು ಇನ್ನು ಮುಂದೆ ಸಮೀಪದ ಶಾಖೆಗಳಿಗೆ ಭೇಟಿ ನೀಡಬೇಕಾಗಿಲ್ಲ, ಅಲ್ಲಿ ಹೋಗಿ ಸರತಿಯಲ್ಲಿ ನಿಲ್ಲಬೇಕಿಲ್ಲ. ಏಕೆಂದರೆ ದೇಶದ ಅತಿದೊಡ್ಡ ಸಾರ್ವಜನಿಕ ಸಾಲದಾತ ಬ್ಯಾಂಕ್​ ಫೋನ್​ ಮೂಲಕವೇ ಪ್ರಮುಖ ಸೇವೆಗಳನ್ನು ನೀಡುತ್ತಿದೆ.

“ನಿಮ್ಮ ಬ್ಯಾಂಕಿಂಗ್​ ಅಗತ್ಯಗಳನ್ನು ಪೂರೈಸಿಕೊಳ್ಳಿ, ಕೇವಲ ಕರೆ ಮಾಡಿ!’ ಎಂದು ಎಸ್.​ಬಿ.ಐ. ಟ್ವೀಟ್​ ಮಾಡಿದೆ. ಗ್ರಾಹಕರು ಈ ಬ್ಯಾಂಕಿಂಗ್​ ಸೇವೆಗಳನ್ನು ದಿನದ 24 ಗಂಟೆಗಳಲ್ಲೂ ಪಡೆಯಬಹುದು.

ಹಾಗಿದ್ದರೆ ಈ ಐದು ಬ್ಯಾಂಕಿಂಗ್​ ಸೇವೆಗಳು ಯಾವುದಿರಬಹುದು ನೋಡೋಣ ಬನ್ನಿ

– ಅಕೌಂಟ್​ ಬ್ಯಾಲೆನ್ಸ್​ ಮತ್ತು ಕೊನೆಯ ಐದು ವಹಿವಾಟುಗಳು

– ಎಟಿಎಂ ಕಾರ್ಡ್​ ನಿರ್ಬಂಧಿಸುವುದು ಮತ್ತು ಡಿಸ್​ಪ್ಯಾಚ್​ ಸ್ಟೇಟಸ್​

– ಚೆಕ್​ ಬುಕ್​ ಡಿಸ್​ಪ್ಯಾಚ್​ ಸ್ಟೇಟಸ್​

– ಇ-ಮೇಲ್​ ಮೂಲಕ ಟಿಡಿಎಸ್​ ಮಾಹಿತಿ ಮತ್ತು ಠೇವಣಿ ಬಡ್ಡಿ ಪ್ರಮಾಣಪತ್ರ

– ಹೊಸ ಎಟಿಎಂ ಕಾರ್ಡ್​ಗಾಗಿ ವಿನಂತಿ

1800 1234, 1800 2100 ಗೆ ಕರೆ ಮಾಡಿ ಎಸ್​.ಬಿ.ಐ. ಬ್ಯಾಂಕಿಂಗ್​ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಅವಕಾಶವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...