ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರು ಇನ್ನು ಮುಂದೆ ಸಮೀಪದ ಶಾಖೆಗಳಿಗೆ ಭೇಟಿ ನೀಡಬೇಕಾಗಿಲ್ಲ, ಅಲ್ಲಿ ಹೋಗಿ ಸರತಿಯಲ್ಲಿ ನಿಲ್ಲಬೇಕಿಲ್ಲ. ಏಕೆಂದರೆ ದೇಶದ ಅತಿದೊಡ್ಡ ಸಾರ್ವಜನಿಕ ಸಾಲದಾತ ಬ್ಯಾಂಕ್ ಫೋನ್ ಮೂಲಕವೇ ಪ್ರಮುಖ ಸೇವೆಗಳನ್ನು ನೀಡುತ್ತಿದೆ.
“ನಿಮ್ಮ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸಿಕೊಳ್ಳಿ, ಕೇವಲ ಕರೆ ಮಾಡಿ!’ ಎಂದು ಎಸ್.ಬಿ.ಐ. ಟ್ವೀಟ್ ಮಾಡಿದೆ. ಗ್ರಾಹಕರು ಈ ಬ್ಯಾಂಕಿಂಗ್ ಸೇವೆಗಳನ್ನು ದಿನದ 24 ಗಂಟೆಗಳಲ್ಲೂ ಪಡೆಯಬಹುದು.
ಹಾಗಿದ್ದರೆ ಈ ಐದು ಬ್ಯಾಂಕಿಂಗ್ ಸೇವೆಗಳು ಯಾವುದಿರಬಹುದು ನೋಡೋಣ ಬನ್ನಿ
– ಅಕೌಂಟ್ ಬ್ಯಾಲೆನ್ಸ್ ಮತ್ತು ಕೊನೆಯ ಐದು ವಹಿವಾಟುಗಳು
– ಎಟಿಎಂ ಕಾರ್ಡ್ ನಿರ್ಬಂಧಿಸುವುದು ಮತ್ತು ಡಿಸ್ಪ್ಯಾಚ್ ಸ್ಟೇಟಸ್
– ಚೆಕ್ ಬುಕ್ ಡಿಸ್ಪ್ಯಾಚ್ ಸ್ಟೇಟಸ್
– ಇ-ಮೇಲ್ ಮೂಲಕ ಟಿಡಿಎಸ್ ಮಾಹಿತಿ ಮತ್ತು ಠೇವಣಿ ಬಡ್ಡಿ ಪ್ರಮಾಣಪತ್ರ
– ಹೊಸ ಎಟಿಎಂ ಕಾರ್ಡ್ಗಾಗಿ ವಿನಂತಿ
1800 1234, 1800 2100 ಗೆ ಕರೆ ಮಾಡಿ ಎಸ್.ಬಿ.ಐ. ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಅವಕಾಶವಿದೆ.