2,254 ಕೋಟಿ ರೂಪಾಯಿ ಮೌಲ್ಯದ ಸೌದಿ ದೊರೆಯ ಬೋಯಿಂಗ್ 747 ಐಶಾರಾಮಿ ವಿಮಾನ ಇದೀಗ ಗುಜರಿಗೆ ಹೋಗಲು ಸಿದ್ಧವಾಗಿದೆ. ಕಳೆದ 10 ವರ್ಷಗಳಿಂದ ಬಳಸದೇ ಬಿಟ್ಟಿದ್ದ ಈ ವಿಮಾನವನ್ನು ಗುಜರಿಗೆ ಹಾಕಲು ನಿರ್ಧರಿಸಲಾಗಿದೆ.
ಸೌದಿ ಅರೇಬಿಯಾದ ರಾಜಕುಮಾರರಾಗಿದ್ದ ಸುಲ್ತಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರು ಈ ವಿಮಾನವನ್ನು ಖರೀದಿಸಿದ್ದು, 2012 ರಲ್ಲಿ ಅವರಿಗೆ ಹಸ್ತಾಂತರ ಮಾಡಬೇಕಿತ್ತು. ಆದರೆ, ಅಷ್ಟರ ವೇಳೆಗೆ ಅವರು ಸಾವನ್ನಪ್ಪಿದ್ದರಿಂದ ವಿಮಾನದ ಹಾರಾಟವೇ ನಡೆದಿರಲಿಲ್ಲ. ಈ ಐಶಾರಾಮಿ ವಿಮಾನ ಇದುವರೆಗೆ ಪರೀಕ್ಷಾರ್ಥ ಹಾರಾಟ ಸೇರಿದಂತೆ ಒಟ್ಟು ಕೇವಲ 42 ಗಂಟೆ ಕಾಲ ಹಾರಾಟ ನಡೆಸಿದೆ.
ಪ್ರೇಮ ವಿವಾಹ ದುರಂತದಲ್ಲಿ ಅಂತ್ಯ; ಕ್ಯಾಮೆರಾದಲ್ಲಿ ಸೆರೆಯಾಯ್ತು ಬರ್ಬರ ಹತ್ಯೆ
ಮೇಲ್ ಆನ್ ಲೈನ್ ವರದಿ ಪ್ರಕಾರ, ವಿಐಪಿ ಇಂಟೀರಿಯರ್ ಸೇರಿದಂತೆ ಐಶಾರಾಮಿ ಸೌಲಭ್ಯಗಳನ್ನು ಒಳಗೊಂಡಿತ್ತು. ಆದರೆ, ಈ ವಿಮಾನ ಹಸ್ತಾಂತರವಾಗದೇ ಉಳಿದಿತ್ತು. ರಾಜಕುಮಾರನ ಸಾವಿನ ನಂತರ ವಿಮಾನದ ಕಡೆಗೆ ಯಾರೂ ಗಮನ ಹರಿಸದ ಕಾರಣ ಅದು ಧೂಳಿಡಿದಿತ್ತು.
ಸಾಮಾನ್ಯವಾಗಿ ಈ ವಿಮಾನ 1,00,000 ಗಂಟೆಗಳ ಕಾಲ ಹಾರಾಟ ನಡೆಸಿದ ನಂತರ ಗುಜರಿಗೆ ಹಾಕಬೇಕಿತ್ತು. ಆದರೆ, ಕೇವಲ 42 ಗಂಟೆಗಳ ಕಾಲ ಹಾರಾಟ ನಡೆಸಿರುವ ಈ ವಿಮಾನವನ್ನು ರಾಜಕುಮಾರನ ಕುಟುಂಬ ಸದಸ್ಯರು ಪಡೆಯದೇ ಇದ್ದುದರಿಂದ ದಶಕದಷ್ಟು ಅವಧಿವರೆಗೆ ಹಾಗೇ ಬಿಟ್ಟಿದ್ದರಿಂದ ಹಾಳಾಗುತ್ತಾ ಬಂದಿದೆ.
ಇದೀಗ ಯುಎಸ್ ನ ಆರಿಝೋನಾದ ಪಿನಾಲ್ ಏರ್ ಪಾರ್ಕ್ ಎಂಬ ವಿಶ್ವಖ್ಯಾತಿಯ ಏರ್ ಪ್ಲೇನ್ ಬೋನ್ ಯಾರ್ಡ್ ಕಂಪನಿ ಈ ವಿಮಾನವನ್ನು ಖರೀದಿಸುತ್ತಿದೆ ಎಂದು ವರದಿಗಳು ತಿಳಿಸಿವೆ.