ಪಿತೃ ಪಕ್ಷದ ಅಮವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ ಎನ್ನಲಾಗುತ್ತದೆ. ಪಿತೃ ಪಕ್ಷದ ಕೊನೆ ದಿನ ಬರುವ ಅಮಾವಾಸ್ಯೆಯಂದು, ಪೂರ್ವಜರನ್ನು ಪೂಜಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 6ರಂದು ಮಹಾಲಯ ಅಮಾವಾಸ್ಯೆ ಬಂದಿದೆ.
ಈ ಬಾರಿ ಮಹಾಲಯ ಅಮವಾಸ್ಯೆಗೆ ಶುಭಯೋಗ ಕೂಡಿ ಬಂದಿದೆ. 2021ರ ನಂತ್ರ 2029ರಲ್ಲಿ ಅಂದ್ರೆ 8 ವರ್ಷಗಳ ನಂತ್ರ ಈ ಶುಭಯೋಗ ಬರಲಿದೆ. ಈ ಹಿಂದೆ 2010ರಲ್ಲಿ ಈ ಶುಭಯೋಗ ಬಂದಿತ್ತು. ಅಕ್ಟೋಬರ್ 6 ರಂದು ಸೂರ್ಯ ಮತ್ತು ಚಂದ್ರ ಇಬ್ಬರೂ ಸೂರ್ಯೋದಯದಿಂದ ಸಂಜೆ 4 ಗಂಟೆ 34 ನಿಮಿಷದವರೆಗೆ ಹಸ್ತ ನಕ್ಷತ್ರದಲ್ಲಿರುತ್ತಾರೆ.
ಈ ರಾಶಿಯವರಿಗಿದೆ ಇಂದು ಆಕಸ್ಮಿಕ ʼಧನ ಲಾಭʼ
ಧಾರ್ಮಿಕ ಗ್ರಂಥಗಳ ಪ್ರಕಾರ, ಈ ಯೋಗದಲ್ಲಿ ಶ್ರಾದ್ಧ ಮಾಡಿದ್ರೆ, ಪೂರ್ವಜರು ಸಂತಸಗೊಳ್ಳುತ್ತಾರೆ. ಸಾಲದಿಂದ ಮುಕ್ತರಬಹುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಿರುತ್ತದೆ. ಈ ಸಂದರ್ಭದಲ್ಲಿ ಶ್ರಾದ್ಧ ಮತ್ತು ದಾನ ಮಾಡಬೇಕು. ಹಾಗೆ ಮಾಡಿದ್ರೆ ಮುಂದಿನ 12 ವರ್ಷಗಳ ಕಾಲ ಪೂರ್ವಜರ ಹಸಿವು ನೀಗಲಿದೆ ಎಂಬ ನಂಬಿಕೆಯಿದೆ.
ಪಿತೃ ಪಕ್ಷದ ಅಮಾವಾಸ್ಯೆಯಂದು, ಶ್ರಾದ್ಧ ಮಾಡಬೇಕು. ಪೂರ್ವಜರಿಗೆ ಖೀರ್ ಮಾಡಿ ಅರ್ಪಿಸಬೇಕು. ಇದನ್ನು ದಾನದ ರೂಪದಲ್ಲಿ ನೀಡಬೇಕು. ಇದು ಪೂರ್ವಜರನ್ನು ತೃಪ್ತಿಗೊಳಿಸುತ್ತದೆ. ಇದೇ ಸಮಯದಲ್ಲಿ ನಿರ್ಗತಿಕರು ಅಥವಾ ಬ್ರಾಹ್ಮಣರಿಗೆ ಬಟ್ಟೆ ಹಾಗೂ ಆಹಾರವನ್ನು ದಾನ ಮಾಡಬೇಕು.