ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟ ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ ಸರ್ದಾರ್ ಉಧಮ್ ಸಿನಿಮಾ ಆಸ್ಕರ್ ನಾಮಿನೇಷನ್ನಲ್ಲಿ ಸ್ಥಾನ ಪಡೆಯಲಿದೆ ಎಂದು ವರದಿಯಾಗಿತ್ತು. ಆದರೆ ತೀರ್ಪುಗಾರರು ಇದೀಗ ಈ ಚಿತ್ರವನ್ನು ಏಕೆ ಆಯ್ಕೆ ಮಾಡಿಲ್ಲ ಎಂಬುದಕ್ಕೆ ಕಾರಣ ನೀಡಿದ್ದಾರೆ.
ಸರ್ದಾರ್ ಉಧಮ್ ಸಿನಿಮಾ ಆಸ್ಕರ್ ನಾಮಿನೇಷನ್ಗೆ ಆಯ್ಕೆಯಾಗದರ ಬಗ್ಗೆ ಮಾಹಿತಿ ನೀಡಿದ ತೀರ್ಪುಗಾರರ ಪೈಕಿ ಒಬ್ಬರಾದ ಇಂದ್ರಾದೀಪ್ ದಾಸ್ಗುಪ್ತಾ ಇದೊಂದು ದೇಶ ಭಕ್ತಿಯ ಸಿನಿಮಾ ಆಗಿದ್ದು ಇದರಲ್ಲಿ ಬ್ರಿಟಿಷರ ಬಗ್ಗೆ ದ್ವೇಷ ಭಾವನೆಯನ್ನು ತೋರಿಸಲಾಗಿದೆ ಎಂದು ಕಾರಣ ನೀಡಿದ್ದಾರೆ.
ಹೊಸ ಗೆಳೆಯನನ್ನು ಹುಡುಕಿಕೊಂಡ ಹೃತಿಕ್ ರೋಷನ್ ಮಾಜಿ ಪತ್ನಿ
ಸರ್ದಾರ್ ಉಧಮ್ ಸಿನಿಮಾ ಉದ್ದವಾಗಿದೆ. ಈ ಸಿನಿಮಾ ಜಲಿಯನ್ವಾಲಾಭಾಗ್ ಹತ್ಯಾಕಾಂಡದ ಕತೆಯನ್ನು ಹೊಂದಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಜೀವದ ಹಂಗು ತೊರೆದ ಹೋರಾಡಿದ ದೇಶ ಭಕ್ತನ ಕತೆ ಆಧರಿಸಿ ಸಿನಿಮಾ ಮಾಡುವುದು ಪ್ರಾಮಾಣಿಕ ಪ್ರಯತ್ನವಾಗಿದೆ. ಅದರ ಜೊತೆಯಲ್ಲಿ ಈ ಸಿನಿಮಾ ಬ್ರಿಟಿಷರ ಮೇಲೆ ನಮಗೆ ಇದ್ದ ದ್ವೇಷವನ್ನು ತೋರಿಸುತ್ತಿದೆ. ಜಾಗತೀಕರಣದ ಈ ಜಮಾನಾದಲ್ಲಿ ಈ ರೀತಿಯಾಗಿ ದ್ವೇಷವನ್ನು ಬಿತ್ತರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮತ್ತೊಬ್ಬ ತೀರ್ಪುಗಾರ ಸದಸ್ಯ ಸುಮಿತ್ ಬಸು, ಕ್ಯಾಮರಾ ವರ್ಕ್, ಎಡಿಟಿಂಗ್, ಸೌಂಡ್ ಡಿಸೈನ್ ಹಾಗೂ ಸ್ಕ್ರೀನ್ಪ್ಲೇ ಹೀಗೆ ನಾನಾ ಕಾರಣಗಳಿಂದ ಈ ಸಿನಿಮಾವನ್ನು ಅನೇಕರು ಇಷ್ಟಪಟ್ಟಿದ್ದಾರೆ. ನನಗೆ ತಿಳಿದ ಪ್ರಕಾರ ಸಿನಿಮಾದ ಅವಧಿಯು ಇಲ್ಲಿ ಸಮಸ್ಯೆಯಾಗಿದೆ. ಕ್ಲೈಮಾಕ್ಸ್ನ್ನು ತುಂಬಾನೇ ಎಳೆದಿದ್ದಾರೆ. ಜಲಿಯನ್ವಾಲಾಬಾಗ್ ಹತ್ಯಾಕಾಂಡದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಅರಿತುಕೊಳ್ಳಲು ಪ್ರೇಕ್ಷಕರು ತುಂಬಾ ಹೊತ್ತು ಕಾಯುವಂತೆ ಆಗಿದೆ ಎಂದ ಹೇಳಿದ್ರು.