ಬೆಂಗಳೂರು: ಮುಜರಾಯಿ ಇಲಾಖೆ ವತಿಯಿಂದ ನಡೆಸುವ ಸಪ್ತಪದಿ ಸರಳ ಸಾಮೂಹಿಕ ವಿವಾಹಕ್ಕೆ ಆಗಸ್ಟ್ ನಲ್ಲಿ ಐದು ದಿನಾಂಕ ನಿಗದಿಪಡಿಸಲಾಗಿದೆ.
ಆಷಾಢ ಮಾಸ ಮುಗಿದ ನಂತರ ಶ್ರಾವಣ ಮಾಸದಲ್ಲಿ ಮದುವೆಯಾಗಲು ನೋಂದಣಿ ಮಾಡಿಸಿಕೊಂಡ ವಧು,ವರರಿಗೆ ಚಿನ್ನದ ತಾಳಿ, ಗುಂಡುಗಳು, ಬಟ್ಟೆಗಳು, ಎರಡು ಕಡೆಯ ಸಂಬಂಧಿಕರಿಗೆ ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಉಚಿತವಾಗಿ ವ್ಯವಸ್ಥೆ ಮಾಡಲಾಗುತ್ತದೆ.
ವಧು, ವರರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆಗಸ್ಟ್ 7, ಆಗಸ್ಟ್ 10, ಆಗಸ್ಟ್ 14, ಆಗಸ್ಟ್ 21, ಆಗಸ್ಟ್ 25 ರಂದು ಸಪ್ತಪದಿ ಸಾಮೂಹಿಕ ವಿವಾಹಕ್ಕೆ ದಿನಾಂಕಗಳನ್ನು ಗೊತ್ತು ಪಡಿಸಲಾಗಿದೆ.