alex Certify ಕಿಕ್ಕಿರಿದ ಅಭಿಮಾನಿಗಳ ವಿಡಿಯೋ ಹಂಚಿಕೊಂಡ ಸಪ್ನಾ ಚೌಧರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಕ್ಕಿರಿದ ಅಭಿಮಾನಿಗಳ ವಿಡಿಯೋ ಹಂಚಿಕೊಂಡ ಸಪ್ನಾ ಚೌಧರಿ…!

Sapna Choudhary Shares Clip of Massive Gathering of Fans at Her Dance Show, Video  Goes Viralಬಿಗ್ ಬಾಸ್ ಖ್ಯಾತಿಯ ಮತ್ತು ಹರ್ಯಾನ್ವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 4.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಸ್ವಪ್ನಾ, ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದು ಭಾರಿ ವೈರಲ್ ಆಗುತ್ತಿದೆ. ಚೌಧರಿಯ ನೃತ್ಯ ಪ್ರದರ್ಶನ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಸೇರಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಸಪ್ನಾ ಚೌಧರಿ ಅವರು ತಮ್ಮ ಇತ್ತೀಚಿನ ನೃತ್ಯ ಕಾರ್ಯಕ್ರಮದ ವೇದಿಕೆಯ ಮೇಲೆ ನಿಂತಿರುವಾಗ ತಿಳಿ ಗೋಲ್ಡನ್ ಸೂಟ್ ಮತ್ತು ಗ್ಲಾಮ್ ಮೇಕಪ್ ಲುಕ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.

ಧೈರ್ಯ ಎಲ್ಲಿಂದ ಬರುತ್ತದೆ ಅಂತಾ ಎಲ್ಲರೂ ಕೇಳುತ್ತಾರೆ. ಬನ್ನಿ, ಧೈರ್ಯ ಎಲ್ಲಿಂದ ಬರುತ್ತದೆ ಅಂತಾ ನಿಮಗೆ ತೋರಿಸುತ್ತೇನೆ ಎಂದು ಸ್ವಪ್ವಾ ಹೇಳಿದಾಗ ಕ್ಯಾಮರಾ ಪ್ರೇಕ್ಷಕರ ಕಡೆಗೆ ತಿರುಗುತ್ತದೆ. ಸಪ್ನಾ ಅವರ ಲೈವ್ ಶೋ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ನೆರೆದಿರುವುದನ್ನು ತೋರಿಸುವಾಗ ವಿಡಿಯೋದ ಹಿನ್ನೆಲೆಯಲ್ಲಿ ಸಂಗೀತ ಪ್ಲೇ ಆಗುತ್ತದೆ.

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡ ಸಪ್ನಾ ಚೌಧರಿ, ಇದಕ್ಕೆ ಯಾವುದೇ ಶೀರ್ಷಿಕೆಯ ಅಗತ್ಯವಿಲ್ಲ ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...