alex Certify ಹಾಡುತ್ತಾ ಸಾಗಿದ್ದ ಸಪ್ನಾ ಚೌಧರಿಗೆ ಸೀಟ್ ಬೆಲ್ಟ್ ನೆನಪಿಸಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡುತ್ತಾ ಸಾಗಿದ್ದ ಸಪ್ನಾ ಚೌಧರಿಗೆ ಸೀಟ್ ಬೆಲ್ಟ್ ನೆನಪಿಸಿದ ನೆಟ್ಟಿಗರು

ಡ್ಯಾನ್ಸರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಸಪ್ನಾ ಚೌಧರಿ ಡ್ರೈವ್ ಮಾಡುತ್ತಾ ಹಾಡು ಹೇಳಿರುವ ವಿಡಿಯೋ ವೈರಲ್ ಆಗಿದೆ. ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಾಡನ್ನು ಚೌಧರಿ ಪೋಸ್ಟ್ ಮಾಡಿದ್ದು, ಅವರ ಫಾಲೋಯರ್ಗಳು ಮೆಚ್ಚಿದ್ದಾರೆ.

ಜನಪ್ರೀಯತೆ ಹೆಚ್ಚಾಗಿ ಸೃಷ್ಟಿಯಾದ ಅಪಾರ ಫಾಲೋಯರ್‌ಗಳಿಂದಾಗಿ ಈ ವಿಡಿಯೋ ಒಂದು ದಿನದೊಳಗೆ 5.73 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಕಂಡಿದೆ. ಗುಲಾಬಿ ಬಣ್ಣದ ಲೆಹೆಂಗಾ, ಆಭರಣ, ಬಳೆಯೊಂದಿಗೆ ಮೇಕಪ್ ಮಾಡಿ ದೇಸಿ ಸ್ಟೈಲ್ನಲ್ಲಿ ಹೊರಟ ಚೌಧರಿ ಕಂಡು ವೀಕ್ಷಕರು ಮೆಚ್ಚಿದ್ದಾರೆ.

48ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ರಾಜಮೌಳಿ

ಸುತ್ತಲೂ ಹಚ್ಚ ಹಸಿರಿನ ಖಾಲಿ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದಾಗ, ಸಪ್ನಾ ಅವರು ಸೋನು ನಿಗಮ್ ಅವರ ಪ್ರಸಿದ್ಧ ಹಾಡು ತು ಕಬ್ ಯೇ ಜಾನೇಗಿಗೆ ಗುನುಗುವುದನ್ನು ಕಾಣಬಹುದು. ಆ ಹಾಡನ್ನು ಬಹಳ ನೆಚ್ಚಿಕೊಂಡಂತೆ ಕಾಣುತ್ತದೆ. ಏಕೆಂದರೆ ಬಹಳ ಅನಾಯಾಸವಾಗಿ ಸಾಹಿತ್ಯ ಹೇಳುತ್ತಾರೆ. ಇನ್ ಸ್ಟಾಗ್ರಾಮ್ನಲ್ಲಿ 3.8 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ಆಕೆಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದೇ ವೇಳೆ ಅವರ ಅಭಿಮಾನಿಯೊಬ್ಬರು ಸೀಟ್ ಬೆಲ್ಟ್ ನೆನಪಿಸಿದ್ದಾರೆ. ವಾಹನ ಚಾಲನೆ ಮಾಡುತ್ತಿದ್ದಾಗ ಸಪ್ನಾ ಸೀಟ್ ಬೆಲ್ಟ್ ಧರಿಸದೇ ಇರುವುದು ಕಾಣಿಸುತ್ತದೆ. ಸೀಟ್ ಬೆಲ್ಟ್ ಧರಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...