ಒಳ್ಳೆಯ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡವಾದರೆ ಅಯ್ಯೋ ಅಪಶಕುನವಾಯ್ತು ಅಂತ ನಾವು ಹೇಳ್ತೇವೆ. ಶಕುನ ಶಾಸ್ತ್ರದ ಪ್ರಕಾರ, ಬರಿ ಬೆಕ್ಕು ಮಾತ್ರವಲ್ಲ ಇನ್ನೂ ಕೆಲವು ಪ್ರಾಣಿಗಳು ರಸ್ತೆಗೆ ಅಡ್ಡವಾದರೂ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಹಾವು : ಶಕುನದ ಪ್ರಕಾರ ಹಾವು ರಸ್ತೆ ದಾಟಿದರೆ ಅಶುಭ. ಸಾಮಾನ್ಯವಾಗಿ ಮಳೆಯ ಸಮಯದಲ್ಲಿ ಹಾವುಗಳು ರಸ್ತೆಗೆ ಬರುತ್ತವೆ. ಹಾವು ಎಡದಿಂದ ಬಲಕ್ಕೆ ಹೋದರೆ ಶತ್ರುಗಳಿಂದ ಭಯವಿದೆ ಎಂದರ್ಥ.
ಮುಂಗುಸಿ : ಹಾವಿನ ತರಹ ಮುಂಗುಸಿ ಕೂಡ ರಸ್ತೆ ದಾಟುವುದು ಶುಭವಲ್ಲ. ಇದರಿಂದ ನಿಮ್ಮ ಕೆಲಸ ಕೆಡುತ್ತದೆ. ಹಗಲಿನಲ್ಲಿ ಮುಂಗುಸಿ ಕಾಣುವುದೇ ಅಪಶಕುನ ಎಂಬ ನಂಬಿಕೆ ಕೂಡ ಇದೆ.
ಹಂದಿ : ಯಾವುದೋ ಒಳ್ಳೆಯ ಕೆಲಸಕ್ಕೆ ಹೊರಟಾಗ ಹಂದಿ ಎಡದಿಂದ ರಸ್ತೆ ದಾಟಿ ಬಲಕ್ಕೆ ಹೋದರೆ ಅದರಿಂದ ಕೆಲಸ ಪೂರ್ತಿಯಾಗುವುದಿಲ್ಲ.
ಕಾಗೆ : ಹೊರಗಡೆ ಹೋದಾಗ ಕಾಗೆ ನಿಮ್ಮ ತಲೆಯನ್ನು ಮುಟ್ಟಿದರೆ ಇದರಿಂದ ಸಾವು ಸಂಭವಿಸಬಹುದು ಅಥವಾ ಯಾವುದೋ ಖಾಯಿಲೆ ಬರಬಹುದು.
ದನ : ರಸ್ತೆಗಳಲ್ಲಿ ಹಸುಗಳು ಮಲಗಿರುವುದು ಸಾಮಾನ್ಯ ಸಂಗತಿ. ನೀವು ಹೊರಗಡೆ ಹೊರಟಾಗ ಒಮ್ಮೆಲೇ ದನಗಳ ಹಿಂಡು ರಸ್ತೆಗೆ ಬರುವುದು ಒಳ್ಳೆಯದಲ್ಲ. ದೂರದ ಯಾತ್ರೆಗೆ ಹೋಗುವ ಸಮಯದಲ್ಲಿ ಹೀಗಾದರೆ ಯಾತ್ರೆಯ ಸಮಯದಲ್ಲಿ ಕಷ್ಟಗಳು ಎದುರಾಗಬಹುದು.
ಹಾಗಾಗಿ ಈ ಎಲ್ಲ ಪ್ರಾಣಿಗಳು ರಸ್ತೆ ದಾಟಿದ್ರೆ, ಮುಂದೆ ಹೋಗುವ ಮೊದಲು, ಸ್ವಲ್ಪ ನಿಂತು ಹೋಗಿ ಎಂದು ಹಿರಿಯರು ಹೇಳುತ್ತಾರೆ.