alex Certify BIG NEWS: ‘ವಾಟ್ಸಾಪ್​’ ಜನಪ್ರಿಯತೆಗೆ ಠಕ್ಕರ್​ ನೀಡಲು ಬಂದಿದೆ ಸ್ವದೇಶಿ ನಿರ್ಮಿತ ‘ಸಂದೇಸ್​’ ಆಪ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ವಾಟ್ಸಾಪ್​’ ಜನಪ್ರಿಯತೆಗೆ ಠಕ್ಕರ್​ ನೀಡಲು ಬಂದಿದೆ ಸ್ವದೇಶಿ ನಿರ್ಮಿತ ‘ಸಂದೇಸ್​’ ಆಪ್​….!

ಭಾರತ ಸರ್ಕಾರವು ಸಂದೇಸ್​ ಎಂಬ ತ್ವರಿತ ಮೆಸೇಜಿಂಗ್​ ಪ್ಲಾಟ್​ಫಾರಂನ್ನು ಆರಂಭಿಸಿದೆ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್​ ಹಾಗೂ ಐಟಿ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​​​ ಲೋಕಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.

ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಸೇರಿದಂತೆ ವಿವಿಧ ಖಾಸಗಿ ಮೆಸೆಜಿಂಗ್​ ಅಪ್ಲಿಕೇಶನ್​ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ಪರ್ಯಾಯ ಮಾರ್ಗವನ್ನು ಹುಡುಕಿದೆ.

ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ವಿಭಾಗದ ರಾಷ್ಟ್ರೀಯ ಮಾಹಿತಿ ಕೇಂದ್ರವು ವಾಟ್ಸಾಪ್​ ಮಾದರಿಯಲ್ಲೇ ಕಾರ್ಯ ನಿರ್ವಹಿಸುವ ಈ ಹೊಸ ವೇದಿಕೆಯನ್ನು ಆರಂಭಿಸಿದೆ. ಮೊಬೈಲ್​ ಸಂಖ್ಯೆ ಅಥವಾ ಇಮೇಲ್​ ಐಡಿ ಸಹಾಯದಿಂದ ಎಲ್ಲಾ ರೀತಿಯ ಸಂವಹನ ಕಾರ್ಯಕ್ಕೆ ವೇದಿಕೆಯಾಗಿ ಬಳಕೆ ಮಾಡಬಹುದಾಗಿದೆ. ಈ ಸಂದೇಸ್​ ಅಪ್ಲಿಕೇಶನ್​ನ್ನು ಪ್ರಸ್ತುತ ಸರ್ಕಾರಿ ನೌಕರರು ಹಾಗೂ ಸರ್ಕಾರದೊಂದಿಗೆ ಸಂಪರ್ಕ ಹೊಂದಿರುವ ಏಜನ್ಸಿಗಳಲ್ಲಿ ಬಳಕೆ ಮಾಡಲಾಗುತ್ತಿದೆ.

ಸಂದೇಸ್​ ಅಪ್ಲಿಕೇಶನ್​​ ಸುರಕ್ಷಿತ, ಓಪನ್​ ಸೋರ್ಸ್ ಆಧಾರಿತ ವೇದಿಕೆಯಾಗಿದೆ. ಇದು ಸರ್ಕಾರಿ ಸ್ವಾಮ್ಯದ ವೇದಿಕೆಯಾಗಿದ್ದು ಸಂಪೂರ್ಣ ನಿಯಂತ್ರಣವು ಕೇಂದ್ರದ ಕೈಯಲ್ಲಿ ಇರಲಿದೆ. ಈ ಅಪ್ಲಿಕೇಶನ್​ ಮೂಲಕ ಸಂದೇಶ ಕಳುಹಿಸುವಿಕೆ, ಫೈಲ್​​ ಹಾಗೂ ಫೋಟೋ, ವಿಡಿಯೋಗಳ ಹಂಚಿಕೆ ಮತ್ತು ಆಡಿಯೋ-ವಿಡಿಯೋ ಕರೆ ಮಾಡಬಹುದಾಗಿದೆ. ಗೂಗಲ್​ ಪ್ಲೇ ಸ್ಟೋರ್​ ಹಾಗೂ ಆ್ಯಪ್​ ಸ್ಟೋರ್​ನಲ್ಲಿ ಈ ಅಪ್ಲಿಕೇಶನ್​ ಲಭ್ಯವಿದೆ ಎಂದು ಚಂದ್ರಶೇಖರ್​​ ಹೇಳಿದ್ದಾರೆ.

ಭಾರತೀಯ ಅಪ್ಲಿಕೇಶನ್​ ಹಾಗೂ ಸಾಫ್ಟ್​ವೇರ್​ಗಳ ಬಳಕೆಯನ್ನು ಉತ್ತೇಜಿಸುವ ಸರ್ಕಾರದ ಉಪಕ್ರಮದ ಭಾಗವಾಗಿ ಈ ಸಂದೇಸ್​ ಅಪ್ಲಿಕೇಶನ್​ ಅಭಿವೃದ್ಧಿ ಮಾಡಲಾಗಿದೆ. ಕಳೆದ ಅನೇಕ ತಿಂಗಳಿನಿಂದ ಖಾಸಗಿ ಮಾಹಿತಿ ಸೋರಿಕೆ ವಿಚಾರದಲ್ಲಿ ವಾಟ್ಸಾಪ್​ ಹಾಗೂ ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಮೂಡಿರುವ ನಡುವೆಯೇ ಕೇಂದ್ರ ಸರ್ಕಾರ ಸಂದೇಸ್​ ಅಪ್ಲಿಕೇಶನ್​ ಮೂಲಕ ಮೆಸೆಜಿಂಗ್​ ಅಪ್ಲಿಕೇಶನ್​ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...