ಶಾಲಾ ಮಕ್ಕಳ ಸ್ವೆಟರ್ ಹಂಚಿಕೆಯಲ್ಲಿ ಸ್ಯಾಂಡಲ್ವುಡ್ ನಟ ಕೋಮಲ್ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಎದುರಾಗಿದೆ. ಈಗಾಗಲೇ ಈ ಗೋಲ್ಮಾಲ್ಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನನ್ನ ಹೆಸರು ವಿನಾಕಾರಣ ಎಳೆ ತರಬೇಡಿ ಎಂದು ನಟ ಕೋಮಲ್ ಹೇಳಿಕೆ ನೀಡಿದ್ದಾರೆ.
ಈ ನಡುವೆ ತಮ್ಮನ ಮೇಲೆ ಬಂದಿರುವ ಆರೋಪದ ವಿಚಾರವಾಗಿ ನಟ ಜಗ್ಗೇಶ್ ಗರಂ ಆಗಿದ್ದಾರೆ ಎನ್ನಲಾಗಿದೆ. ಟ್ವೀಟ್ ಮೂಲಕ ಜಗ್ಗೇಶ್ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ.
ಸ್ವೆಟರ್ ಗೋಲ್ಮಾಲ್ ಸುದ್ದಿ ಚರ್ಚೆಗೆ ಬರುತ್ತಿದ್ದಂತೆಯೇ ನಟ ಜಗ್ಗೇಶ್ ಇಂದು ಪರೋಕ್ಷ ಟಾಂಗ್ ನೀಡುವಂತೆ ಟ್ವೀಟಾಯಿಸಿದ್ದಾರೆ. ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯರ್ಥ ತೋರಿಕೆ ಏಕೆ ಬೇಕು..? ಆನೆ ರಾಜಮಾರ್ಗದಲ್ಲಿ ಆಗಲಿ , ಗಲ್ಲಿಯಲ್ಲಾಗಲಿ ನಡೆಯುವಾಗ ನಾಯಿ ಬೊಗಳುವುದು ಸಹಜ..! ನಮ್ಮ ಗುಣ ಆನೆಯಂತೆ ಇದ್ದಾಗ, ಬೊಗಳುವ ನಾಯಿಯ ಸಮಕ್ಕೆ ನಾವು ಇಳಿಯಬಾರದು. ಆಕಸ್ಮಿಕ ಸಿಟ್ಟಿಗೆ ಇಳಿದರೆ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ. ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ ಎಂದು ಟ್ವೀಟಾಯಿಸಿದ್ದಾರೆ.