alex Certify ಡಿಸಿ ಮನೆ ಆವರಣದಲ್ಲಿ ಶ್ರೀಗಂಧ ಮರ ಕಳವು, ಮಾಲು ಸಮೇತ ಕಳ್ಳ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸಿ ಮನೆ ಆವರಣದಲ್ಲಿ ಶ್ರೀಗಂಧ ಮರ ಕಳವು, ಮಾಲು ಸಮೇತ ಕಳ್ಳ ಅರೆಸ್ಟ್

ಧಾರವಾಡ: ಧಾರವಾಡ ಜಿಲ್ಲಾ ಅಧಿಕಾರಿಗಳ ಮನೆ ಆವರಣದಲ್ಲಿದ್ದ ಒಂದು ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಮಾರುತಿ ತಂದೆ ಯಮನಪ್ಪ ಕಟ್ಟಿಮನಿ(31) ಬಂಧಿತ ಆರೋಪಿಯಾಗಿದ್ದು, ಆರೋಪಿಯನ್ನು  ಮಾಲು ಸಮೇತ ಧಾರವಾಡ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಧಾರವಾಡ ಶಹರದಲ್ಲಿರುವ ಜಿಲ್ಲಾಧಿಕಾರಿಗಳ ವಸತಿಗೃಹ ಆವರಣದಲ್ಲಿನ ಒಂದು ಶ್ರೀಗಂಧದ ಮರ ಮತ್ತು ಗುಂಗರಗಟ್ಟಿ ಶ್ರೀಗಂಧದ ನೇಡುತೋಪಿನಲ್ಲಿರುವ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿದು ತುಂಡುಗಳನ್ನಾಗಿ ಪರಿವರ್ತಿಸಿ, ಸುಮಾರು ಒಂದು ಲಕ್ಷ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುವ ಸಮಯದಲ್ಲಿ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮತ್ತು ಕಳ್ಳತನದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೌರಭಕುಮಾರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಆರ್.ಎಸ್.ಉಪ್ಪಾರ ಹಾಗೂ ಉಪ ವಲಯ ಅರಣ್ಯಧಿಕಾರಿಗಳಾದ ಎಮ್.ಎಮ್.ತಲ್ಲೂರ, ಸಿ.ಎಸ್.ರೊಟ್ಟಿ, ಯಲ್ಲನಾಯಕ ಹಮಾಣಿ, ಅರಣ್ಯ ರಕ್ಷಕರಾದ ಭರತೇಶ ಮಗದುಮ್, ಚಾಂದಭಾಷಾ ಮುಲ್ಲಾ, ಕಲ್ಲಪ್ಪ , ಬಸಪ್ಪ ಕರಡಿ, ಶಾರೂನ್.ಎಸ್,.ಮಾರುತಿ ಎಣ್ಣಿ, ಶಿವಾನಂದ ಕೊಂಡಿಕೊಪ್ಪ, ಪರಶುರಾಮ ಗಾಡಿವಡ್ಡರ ಹಾಗೂ ಅಲ್ತಾಫ ಮುಲ್ಲಾ ಪೊಲೀಸ್ ನೀರಿಕ್ಷಕರು ಹಾಗೂ ಎನ್.ಎಚ್.ಸಾಳುಂಕೆ ಎ.ಎಸ್.ಐ,. ಡಿ.ಎನ್. ಗುಂಡಗೈ, ಎಸ್.ಎಚ್. ಕೆಂಪೋಡಿ, ಸಿ.ಸಿ.ಬಿ, ಧಾರವಾಡ, ಸಿಬ್ಬಂದಿಯವರು ದಾಳಿಯಲ್ಲಿ ಭಾಗವಹಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...