ಒಡಿಶಾದ ಹೆಸರಾಂತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ತಮ್ಮ ದೆಹಲಿ ಭೇಟಿಯ ನೋಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪಟ್ನಾಯಕ್ ಪೋಸ್ಟ್ ಮಾಡಿರುವ ವಿಡಿಯೋ ನೆಟ್ಟಿಗರಲ್ಲಿ ಕಳವಳ ತಂದಿದೆ. ಆ ಕ್ಲಿಪ್ ಇಂಡಿಯಾ ಗೇಟ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ತೋರಿಸುತ್ತದೆ. ಪಟ್ನಾಯಕ್ ಸೆರೆ ಹಿಡಿದಿರುವ ಪ್ಲಾಸ್ಟಿಕ್ ಮಾಲಿನ್ಯ ಶಾಕ್ ಆಗುತ್ತದೆ.
ಹೊಸ ದೆಹಲಿ-ಇಂಡಿಯಾ ಗೇಟ್ನಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳಗಳ ಚಿತ್ರೀಕರಣದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಮುಂದುವರೆದಂತೆ, ಸ್ಮಾರಕದ ಸುತ್ತಲಿನ ರಸ್ತೆಯನ್ನು ತೋರಿಸಲಾಗುತ್ತದೆ. ದೇಶದ ಹುತಾತ್ಮರಿಗೆ ಸಮರ್ಪಿತವಾಗಿರುವ ಇಂಡಿಯಾ ಗೇಟ್ನ ಮುಂಭಾಗದ ದಾರಿಯ ಬದಿಯಲ್ಲಿ ಪ್ಲಾಸ್ಟಿಕ್ ಬ್ಯಾಗ್, ಕಪ್ಗಳು, ಬಾಟಲಿಗಳು ಮತ್ತು ಸಾಕಷ್ಟು ಕಸದ ರಾಶಿಯನ್ನು ಕಾಣಬಹುದು.
ಇಂದು ದೆಹಲಿಯ ಇಂಡಿಯಾ ಗೇಟ್ಗೆ ಭೇಟಿ ನೀಡಲು ಸಂತೋಷವಾಯಿತು. ಆದರೆ ಸುತ್ತಲೂ ಬಿದ್ದಿರುವ ಕಸವನ್ನು ನೋಡಿ ನಿರಾಶೆಯಾಯಿತು. ದಯವಿಟ್ಟು ಕ್ರಮ ಕೆೈಗೊಳ್ಳಲು ಅಧಿಕಾರಿಗಳನ್ನು ವಿನಂತಿಸಿರುವ ಅವರು ನಮ್ಮ ನಗರಗಳನ್ನು ವಿಶೇಷವಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ತಾಣಗಳನ್ನು ಸ್ವಚ್ಛವಾಗಿಡಲು ಜನರಿಗೆ ಮನವಿ ಮಾಡಿ. ಎಂದು ಪಟ್ನಾಯಕ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.