alex Certify ಕೈಗೆ ಹಚ್ಚಿಕೊಳ್ಳಬೇಕಿದ್ದ ಸ್ಯಾನಿಟೈಸರ್​ನ್ನು ಮೈತುಂಬಾ ಮೆತ್ತಿಕೊಂಡ ವೃದ್ಧ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಗೆ ಹಚ್ಚಿಕೊಳ್ಳಬೇಕಿದ್ದ ಸ್ಯಾನಿಟೈಸರ್​ನ್ನು ಮೈತುಂಬಾ ಮೆತ್ತಿಕೊಂಡ ವೃದ್ಧ: ವಿಡಿಯೋ ವೈರಲ್

ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಹ್ಯಾಂಡ್​ ಸ್ಯಾನಿಟೈಸರ್​ ಬಳಕೆ ಕಾಮನ್​ ಎಂಬಂತೆ ಆಗಿಬಿಟ್ಟಿದೆ. ನೀವು ಎಲ್ಲೇ ಹೋದರೂ ಸಹ ಸ್ಯಾನಿಟೈಸರ್​ಗಳನ್ನ ನೀಡುತ್ತಾರೆ. ಅಂಗಡಿಗಳಲ್ಲಿ, ಎಟಿಂಎಂಗಳಲ್ಲಿ, ಮಾಲ್​, ಹೋಟೆಲ್​ ಹೀಗೆ ಎಲ್ಲಿ ಹೋದರೂ ಸ್ಯಾನಿಟೈಸರ್​ಗಳನ್ನ ಸಾರ್ವಜನಿಕ ಬಳಕೆಗೆ ಇಟ್ಟಿರೋದನ್ನ ನೀವು ನೋಡಿರ್ತೀರಾ.

ಸ್ಯಾನಿಟೈಸರ್​ಗಳನ್ನ ಕೈಗಳಿಗೆ ಹೆಚ್ಚಿಕೊಳ್ಳಲಿ ಎಂದು ನೀಡುತ್ತಾರೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ವೃದ್ಧನೊಬ್ಬ ಸ್ಯಾನಿಟೈಸರ್​​ನ್ನು ಬಾಡಿ ಲೋಷನ್​ನಂತೆ ಮೈ ತುಂಬಾ ಬಳಿದುಕೊಂಡಿದ್ದಾನೆ. ಎರಡೆರಡು ಬಾರಿ ಈ ರೀತಿ ಹಚ್ಚಿಕೊಂಡಿದ್ದಾನೆ.

50 ಸೆಕೆಂಡ್​ಗಳ ವಿಡಿಯೋವನ್ನ ಐಪಿಎಸ್​ ಅಧಿಕಾರಿ ರೂಪಿನ್​ ಶರ್ಮಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಕೊರೊನಾಗೆ ಈ ವ್ಯಕ್ತಿಯ ಕೂದಲನ್ನೂ ಅಲುಗಾಡಿಸಲು ಸಾಧ್ಯವಿಲ್ಲ. ಆದರೆ ಚಾಚಾ ನೀವು ಮಾಸ್ಕ್​ನ್ನು ಕೆಳಗೆ ಹಾಕಿಕೊಳ್ಳಬಾರದಿತ್ತು ಎಂದು ಈ ವಿಡಿಯೋಗೆ ಶರ್ಮಾ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...