ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಕಾಮನ್ ಎಂಬಂತೆ ಆಗಿಬಿಟ್ಟಿದೆ. ನೀವು ಎಲ್ಲೇ ಹೋದರೂ ಸಹ ಸ್ಯಾನಿಟೈಸರ್ಗಳನ್ನ ನೀಡುತ್ತಾರೆ. ಅಂಗಡಿಗಳಲ್ಲಿ, ಎಟಿಂಎಂಗಳಲ್ಲಿ, ಮಾಲ್, ಹೋಟೆಲ್ ಹೀಗೆ ಎಲ್ಲಿ ಹೋದರೂ ಸ್ಯಾನಿಟೈಸರ್ಗಳನ್ನ ಸಾರ್ವಜನಿಕ ಬಳಕೆಗೆ ಇಟ್ಟಿರೋದನ್ನ ನೀವು ನೋಡಿರ್ತೀರಾ.
ಸ್ಯಾನಿಟೈಸರ್ಗಳನ್ನ ಕೈಗಳಿಗೆ ಹೆಚ್ಚಿಕೊಳ್ಳಲಿ ಎಂದು ನೀಡುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ವೃದ್ಧನೊಬ್ಬ ಸ್ಯಾನಿಟೈಸರ್ನ್ನು ಬಾಡಿ ಲೋಷನ್ನಂತೆ ಮೈ ತುಂಬಾ ಬಳಿದುಕೊಂಡಿದ್ದಾನೆ. ಎರಡೆರಡು ಬಾರಿ ಈ ರೀತಿ ಹಚ್ಚಿಕೊಂಡಿದ್ದಾನೆ.
50 ಸೆಕೆಂಡ್ಗಳ ವಿಡಿಯೋವನ್ನ ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಕೊರೊನಾಗೆ ಈ ವ್ಯಕ್ತಿಯ ಕೂದಲನ್ನೂ ಅಲುಗಾಡಿಸಲು ಸಾಧ್ಯವಿಲ್ಲ. ಆದರೆ ಚಾಚಾ ನೀವು ಮಾಸ್ಕ್ನ್ನು ಕೆಳಗೆ ಹಾಕಿಕೊಳ್ಳಬಾರದಿತ್ತು ಎಂದು ಈ ವಿಡಿಯೋಗೆ ಶರ್ಮಾ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.
https://youtu.be/DSSdSuiznEg