alex Certify ಅಕ್ಟೋಬರ್ 27ಕ್ಕೆ ‘ಯಶೋದಾ’ ಟ್ರೈಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಟೋಬರ್ 27ಕ್ಕೆ ‘ಯಶೋದಾ’ ಟ್ರೈಲರ್ ರಿಲೀಸ್

ಹರಿ ಹರೀಶ್ ನಿರ್ದೇಶನದ ಸಮಂತಾ ರುತ್ ಪ್ರಭು ಅಭಿನಯದ ಪಾನ್ ಇಂಡಿಯಾ ಸಿನಿಮಾ ‌ʼಯಶೋದಾʼ ಇದೇ ನವೆಂಬರ್ 11ರಂದು ವಿಶ್ವಾದ್ಯಂತ ತೆರೆ ಮೇಲೆ ಬರಲಿದ್ದು ,ನಾಳೆ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.

ಈ ಚಿತ್ರದ ಟ್ರೈಲರ್ 5 ಭಾಷೆಗಳಲ್ಲಿ ರಿಲೀಸ್ ಆಗಲಿದ್ದು ಕನ್ನಡ ವರ್ಷನ್ ಅನ್ನು ರಕ್ಷಿತ್ ಶೆಟ್ಟಿ ಲಾಂಚ್ ಮಾಡಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಸಮಂತಾ ರುತ್ ಪ್ರಭು ಸೇರಿದಂತೆ ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್ ಕುಮಾರ್, ಸಂಪತ್ ರಾಜ್, ದಿವ್ಯ ಶ್ರೀಪಾದ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಶ್ರೀದೇವಿ ಮೂವೀಸ್ ಬ್ಯಾನರ್ ನಡಿ ಶಿವಲೆಂಕ ಕೃಷ್ಣ ಪ್ರಸಾದ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಮಣಿಶರ್ಮ ಸಂಗೀತ ಸಂಯೋಜನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...