alex Certify ಇಲ್ಲಿದೆ ರಶ್ಮಿಕಾ ಮಂದಣ್ಣ ಸೇರಿದಂತೆ ದಕ್ಷಿಣ ಭಾರತದ ಟಾಪ್‌ ನಟಿಯರ ಶೈಕ್ಷಣಿಕ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರಶ್ಮಿಕಾ ಮಂದಣ್ಣ ಸೇರಿದಂತೆ ದಕ್ಷಿಣ ಭಾರತದ ಟಾಪ್‌ ನಟಿಯರ ಶೈಕ್ಷಣಿಕ ವಿವರ

ಸಮಂತಾ ರುತ್ ಪ್ರಭು

ಟಾಲಿವುಡ್ ಬ್ಲಾಕ್‌ ಬಸ್ಟರ್ ಹಿಟ್ ಚಿತ್ರ ‘ಪುಷ್ಪ: ದಿ ರೈಸ್ – ಭಾಗ 1’ ನಲ್ಲಿ ಐಟಂ ಸಾಂಗ್‌ ಮೂಲಕ ಇತ್ತೀಚೆಗೆ ಭಾರೀ ಸುದ್ದಿ ಮಾಡುತ್ತಿರುವ ಸಮಂತಾ‌ ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನ ಹೋಲಿ ಏಂಜಲ್ಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಅದರ ನಂತರ, ಅವರು ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ.

ರಶ್ಮಿಕಾ ಮಂದಣ್ಣ

Rashmika Mandanna

ತಮ್ಮ ಇತ್ತೀಚಿನ ಚಿತ್ರ, ‘ಪುಷ್ಪ: ದಿ ರೈಸ್ – ಭಾಗ 1’ ಯಶಸ್ಸಿನಲ್ಲಿ ಮುಳುಗೇಳುತ್ತಿರುವ ರಶ್ಮಿಕಾ ಮಂದಣ್ಣ ಬೆಂಗಳೂರಿನ ಎಂಎಸ್ ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಅನುಷ್ಕಾ ಶೆಟ್ಟಿ

Anushka Shetty

ಅನುಷ್ಕಾ ಶೆಟ್ಟಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್‌ (ಬಿಸಿಎ) ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಜೊತೆಗೆ ಸ್ವತಃ ಯೋಗ ಬೋಧಕರಾಗಿ ತರಬೇತಿ ಪಡೆದಿದ್ದಾರೆ.

ನಯನತಾರಾ

Nayanthara

ನಯನತಾರಾ ತಮ್ಮ ಶಾಲಾ ಶಿಕ್ಷಣವನ್ನು ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮಾಡಿದ್ದು, ಕೇರಳದ ಬಾಲಿಕಾ ಮಾಡೋಮ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ನಂತರ, ಅವರು ಕೇರಳದ ತಿರುವಲ್ಲಾದ ಮಾರ್ಥೋಮಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ.

ಶೃತಿ ಹಾಸನ್

Shruti Haasan

ಶ್ರುತಿ ಹಾಸನ್ ತನ್ನ ಶಾಲಾ ಶಿಕ್ಷಣವನ್ನು ಚೆನ್ನೈನಲ್ಲಿ ಪೂರ್ಣಗೊಳಿಸಿದ್ದು, ಮುಂಬೈನ ಸೇಂಟ್ ಆಂಡ್ರ್ಯೂಸ್ ಕಾಲೇಜಿನಲ್ಲಿ ಮನೋವಿಜ್ಞಾನ ಅಧ್ಯಯನ ಮಾಡಿದ್ದಾರೆ. ಅದಾದ ಕೂಡಲೇ ಶೃತಿ ಕ್ಯಾಲಿಫೋರ್ನಿಯಾದ ಮ್ಯುಸಿಷಿಯನ್ಸ್‌ ಸಂಸ್ಥೆಯಿಂದ ಸಂಗೀತ ಕಲಿಯಲು ಅಮೆರಿಕಕ್ಕೆ ತೆರಳಿದ್ದರು.

ಕಾಜಲ್ ಅಗರ್ವಾಲ್

Kajal Agarwal

ಕಾಜಲ್ ಅಗರ್ವಾಲ್ ತನ್ನ ಶಾಲಾ ಶಿಕ್ಷಣವನ್ನು ಮುಂಬೈನ ಸೇಂಟ್ ಆನ್ಸ್ ಹೈಸ್ಕೂಲ್ ಮತ್ತು ಜೈ ಹಿಂದ್ ಕಾಲೇಜಿನಲ್ಲಿ ಜೂನಿಯರ್ ಕಾಲೇಜು ವ್ಯಾಸಂಗ ಮುಗಿಸಿದ್ದಾರೆ. ನಂತರ ಈ ನಟಿ ಮುಂಬೈನ ಕೆಸಿ ಕಾಲೇಜಿನಲ್ಲಿ ಮಾರ್ಕೆಟಿಂಗ್ ಮತ್ತು ಜಾಹೀರಾತಿನಲ್ಲಿ ಪರಿಣತಿ ಪಡೆಯುವ ಮೂಲಕ ಮಾಸ್ ಮೀಡಿಯಾದಲ್ಲಿ ಪದವಿ ಪಡೆದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...