alex Certify ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ನಟಿ ಸಮಂತಾರಿಂದ ಮಾನನಷ್ಟ ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ನಟಿ ಸಮಂತಾರಿಂದ ಮಾನನಷ್ಟ ಕೇಸ್

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇತ್ತೀಚೆಗೆ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ಬೇರೆಯಾಗುವುದಾಗಿ ಘೋಷಿಸಿದ ಸಮಂತಾ ರುತ್ ಪ್ರಭು ವಿರುದ್ಧ, ಕೆಲವು ಯೂಟ್ಯೂಬ್ ಚಾನೆಲ್ ಗಳು ದುರುದ್ದೇಶಪೂರಿತ ವಿಚಾರಗಳನ್ನು ಸ್ಟ್ರೀಮಿಂಗ್ ಮಾಡಿವೆ ಎಂದು ಆರೋಪಿಸಿ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.

ಮನೆಯಲ್ಲಿರುವ ಈ ವಸ್ತುಗಳನ್ನು ಹೊರಗೆ ಹಾಕಿದ್ರೆ ಒಲಿಯಲಿದ್ದಾಳೆ ಲಕ್ಷ್ಮಿ

ಸುಮನ್ ಟಿವಿ, ತೆಲುಗು ಜನಪ್ರಿಯ ಟಿವಿ ಸೇರಿದಂತೆ ಇನ್ನೂ ಕೆಲವು ಯೂಟ್ಯೂಬ್ ಚಾನೆಲ್‌ಗಳು ತನ್ನ ಇಮೇಜ್ ಅನ್ನು ಅಪಖ್ಯಾತಿಗೊಳಿಸಿದ್ದಕ್ಕಾಗಿ ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೆ, ವೆಂಕಟ್ ರಾವ್ ಎಂಬ ವಕೀಲರ ವಿರುದ್ಧ ಸಮಂತಾ ಲೀಗಲ್ ನೋಟಿಸ್ ಸಲ್ಲಿಸಿದ್ದಾರೆ. ಅವರು ಸಮಂತಾ ಅವರ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದರು ಮತ್ತು ಆಕೆಗೆ ಸಂಬಂಧವಿದೆ ಎಂದು ಆರೋಪಿಸಿದ್ದರು.

ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ವಿರುದ್ಧ ಅಂತರ್ಜಾಲದಲ್ಲಿ ವ್ಯಾಪಕ ನೆಗೆಟಿವ್ ಹೇಳಿಕೆಗಳನ್ನು ನೀಡಲಾಗಿದೆ. ಇದರಿಂದ ನಟಿ ಬೇಸತ್ತು ಹೋಗಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...