
ಖ್ಯಾತ ನಟಿ ಸಮಂತಾ ರುತ್ ಪ್ರಭು ವಧುವಿನಂತೆ ಸಿಂಗಾರಗೊಂಡಿದ್ದು ಅವರ ಪಕ್ಕದಲ್ಲಿ ವಿಜಯ್ ದೇವರಕೊಂಡ ನಿಂತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ. ಪ್ರಸ್ತುತ ಈ ಜೋಡಿ ಕುಶಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಮಂಗಳವಾರದಂದು ಆಂಧ್ರಪ್ರದೇಶದ ದ್ರಾಕ್ಷಾರಾಮದಲ್ಲಿರುವ ದೇವಸ್ಥಾನದಲ್ಲಿ ಪೂಜೆಯ ಶೂಟಿಂಗ್ ನಡೆದಿದೆ. ಈ ವೇಳೆ ಸಮಂತಾ ಸರಳವಾದ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ಸಮಂತಾ ಜೊತೆಯಲ್ಲಿ ನಟ ವಿಜಯ್ ದೇವರಕೊಂಡ ಕೂಡ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ಸಮಂತಾ ಹಾಗೂ ವಿಜಯ್ ತಮ್ಮ ಸಹನಟರೊಂದಿಗೆ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳನ್ನು ನೋಡುತ್ತಿದ್ದಂತೆಯೇ ಅವರೆಡೆಗೆ ತಿರುಗಿ ನಮಸ್ಕರಿಸಿದ್ದಾರೆ.
ಸಮಂತಾ ಹಾಗೂ ವಿಜಯ್ ಸದ್ಯ ಕುಶಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾ ರೊಮ್ಯಾಂಟಿಕ್ ಕತೆಯನ್ನು ಹೊಂದಿದ್ದು ಈ ಜೋಡಿಯ ಎರಡನೇ ಸಿನಿಮಾ ಇದಾಗಿದೆ. ಈ ಹಿಂದೆ 2018ರಲ್ಲಿ ಮಹಾನಟಿ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತ್ತು.