ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ‘ಆಂತಿಮ್ ದಿ ಫೈನಲ್ ಟ್ರುತ್’ ಪೋಸ್ಟರ್ ಗೆ ಅವರ ಅಭಿಮಾನಿಗಳು ಹಾಲೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಲ್ಮಾನ್ ಖಾನ್, ಈ ರೀತಿ ಹಾಲನ್ನು ವ್ಯರ್ಥ ಮಾಡಬೇಡಿ. ಅದರ ಬದಲು ಅಗತ್ಯವಿರುವ ಮಕ್ಕಳಿಗೆ ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಹಲವಾರು ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ, ನೀವು ಹಾಲನ್ನು ವ್ಯರ್ಥ ಮಾಡುತ್ತಿದ್ದೀರಿ. ನೀವು ಹಾಲು ನೀಡಲು ಬಯಸಿದರೆ, ಹಾಲು ಕುಡಿಯಲು ಸಿಗದ ಬಡ ಮಕ್ಕಳಿಗೆ ಅದನ್ನು ನೀಡುವಂತೆ ತನ್ನ ಅಭಿಮಾನಿಗಳಿಗೆ ಸಲ್ಮಾನ್ ಕೋರಿದ್ದಾರೆ. ಅಭಿಮಾನಿಗಳು ತಮ್ಮ ಚಿತ್ರದ ಪೋಸ್ಟರ್ ಗೆ ಹಾಲೆರೆಯುವ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟ, ಈ ರೀತಿ ಮಾಡದಂತೆ ವಿನಂತಿ ಮಾಡಿಕೊಂಡಿದ್ದಾರೆ.
ಆಂತಿಮ್ ಚಿತ್ರದಲ್ಲಿ ಸಲ್ಮಾನ್, ಸಿಖ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮರಾಠಿ ಬ್ಲಾಕ್‌ಬಸ್ಟರ್ ಮುಲ್ಶಿ ಪ್ಯಾಟರ್ನ್‌ನ ರಿಮೇಕ್ ಆಗಿದೆ. ಆಂತಿಮ್ ಚಿತ್ರದಲ್ಲಿ ಆಯುಷ್ ಶರ್ಮಾ, ಉಪೇಂದ್ರ ಲಿಮಾಯೆ ಮತ್ತು ಮಹಿಮಾ ಮಕ್ವಾನಾ ಕೂಡ ನಟಿಸಿದ್ದಾರೆ.
ಚಿತ್ರ ಬಿಡುಗಡೆಯಾದ ಮೊದಲ ದಿನವೇ 4.25 ಕೋಟಿ ಗಳಿಸಿದ್ದು, ಎರಡೇ ದಿನಗಳಲ್ಲಿ 10 ಕೋಟಿ ರೂ. ಗಳಿಸಿದೆ ಎಂಬ ಬಗ್ಗೆ ವರದಿ ವರದಿ ತಿಳಿಸಿದೆ. ನವೆಂಬರ್ 26 ರಂದು ಬಿಡುಗಡೆಯಾದ ಸಿನಿಮಾ ಆಂಟಿಮ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಾ ಎಂದು ಕಾದು ನೋಡಬೇಕಿದೆ.