alex Certify ಕಮಲ್ ನಟನೆಯ `ವಿಕ್ರಮ್` ಸಿನೆಮಾ ಸಕ್ಸಸ್..! ಚಿರಂಜೀವಿ ಮನೆಯಲ್ಲಿ ನಡೆದ ಸಂಭ್ರಮದಲ್ಲಿ ಸಲ್ಮಾನ್‌ ಖಾನ್‌ ಭಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಮಲ್ ನಟನೆಯ `ವಿಕ್ರಮ್` ಸಿನೆಮಾ ಸಕ್ಸಸ್..! ಚಿರಂಜೀವಿ ಮನೆಯಲ್ಲಿ ನಡೆದ ಸಂಭ್ರಮದಲ್ಲಿ ಸಲ್ಮಾನ್‌ ಖಾನ್‌ ಭಾಗಿ

ಕಮಲ್‌ ಹಾಸನ್ ನಟಿಸಿರೋ `ವಿಕ್ರಮ್` ಸಿನೆಮಾ ಬಾಕ್ಸಾಫೀಸ್‌ ನಲ್ಲಿ ಧೂಳೆಬ್ಬಿಸಿದೆ. ಸೂಪರ್ ಹಿಟ್ ಆಗಿರೋ ದಕ್ಷಿಣ ಸಿನೆಮಾಗಳ ಸರಣಿಯಲ್ಲಿ ಈಗ `ವಿಕ್ರಮ್` ಕೂಡಾ ಸೇರಿದೆ. 2.0 ಚಿತ್ರದ ನಂತರ ಈ ಸಿನೆಮಾದ ಮೊದಲ ವಾರದ ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡಿದೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲೂ ಡಬ್ಬಿಂಗ್ ಆಗಿರೋ ಈ ಸಿನೆಮಾ ಅಲ್ಲೂ ಕೂಡಾ ಒಳ್ಳೆ ಕಲೆಕ್ಷನ್ ಮಾಡ್ತಿದೆ.

ಲೋಕೇಶ್ ಕನಕರಾಜ್​ ನಿರ್ದೇಶನದ ವಿಕ್ರಮ್ ಚಿತ್ರ ಜೂನ್ 3, 2022ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಕಮಲ್ ಹಾಸನ್ ಸೂಪರ್ ಹಿಟ್ ಸಿನಿಮಾ ಲಿಸ್ಟ್​ನಲ್ಲಿ ಈ ಸಿನೆಮಾ ಕೂಡಾ ಸೇರಿದೆ. ವಿಕ್ರಮ್ ಸಿನೆಮಾ ಸಕ್ಸಸ್ ಸೆಲೆಬ್ರೆಟ್ ಮಾಡಿರುವ ಕಮಲ್ ಹಾಸನ್​​ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಕಮಲ್ ಹಾಸನ್ ಖುಷಿಯಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸಲ್ಮಾನ್​ಖಾನ್​ ಮತ್ತು ಲೋಕೇಶನ್ ಕನಕರಾಜ್ ಪಾಲ್ಗೊಂಡು ಕಮಲ್​​ಹಾಸನ್​ ಅವರಿಗೆ ಅಭಿನಂದಿಸುವ ಮೂಲಕ ಗೌರವ ಸಲ್ಲಿಸಿದರು.

ಚಿರಂಜೀವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಘಟಾನುಘಟಿ ನಟರು ಇರುವ ಕೆಲವು ಚಿತ್ರಗಳನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಲಿವುಡ್ ನಟ ಸಲ್ಮಾನ್​ಖಾನ್​ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರನ್ನು ಸಹ ಕಾಣಬಹುದು. ಈ ಫೋಟೊ ಜೊತೆ ಜೊತೆಗೆ ಚಿರಂಜೀವಿ​ ` ನನ್ನ ಆತ್ಮೀಯ ಸಲ್ಲುಭಾಯ್ @BeingSalmanKhan @Dir_Lokesh ಮತ್ತು ತಂಡದೊಂದಿಗೆ ನಿನ್ನೆ ರಾತ್ರಿ ನನ್ನ ಮನೆಯಲ್ಲಿ # ವಿಕ್ರಮ್ ಅವರ ಅದ್ಭುತ ಯಶಸ್ಸಿಗೆ ನನ್ನ ಹಿರಿಯ ಸ್ನೇಹಿತ @ikamalhaasan ಅವರ ಖುಷಿಯಲ್ಲಿ ಪಾಲ್ಗೊಂಡಿದ್ದೇವೆ. ಇದು ತುಂಬಾ ಕುತೂಹಲಕಾರಿ ಅಷ್ಟೆ ನಿಗೂಢ ಕಥಾ ಹಂದರವನ್ನ ಹೊಂದಿರುವ ಚಿತ್ರ.!! ಥ್ಯಾಂಕ್ಯೂ ಮೈ ಫ್ರೆಂಡ್‌ !! ದೇವರು ನಿನಗೆ ಹೆಚ್ಚಿನ ಶಕ್ತಿ ಕೊಡಲಿ! ಅಂತ ಕ್ಯಾಪ್ಷನ್​ನಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...