ಕಮಲ್ ಹಾಸನ್ ನಟಿಸಿರೋ `ವಿಕ್ರಮ್` ಸಿನೆಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದೆ. ಸೂಪರ್ ಹಿಟ್ ಆಗಿರೋ ದಕ್ಷಿಣ ಸಿನೆಮಾಗಳ ಸರಣಿಯಲ್ಲಿ ಈಗ `ವಿಕ್ರಮ್` ಕೂಡಾ ಸೇರಿದೆ. 2.0 ಚಿತ್ರದ ನಂತರ ಈ ಸಿನೆಮಾದ ಮೊದಲ ವಾರದ ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡಿದೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲೂ ಡಬ್ಬಿಂಗ್ ಆಗಿರೋ ಈ ಸಿನೆಮಾ ಅಲ್ಲೂ ಕೂಡಾ ಒಳ್ಳೆ ಕಲೆಕ್ಷನ್ ಮಾಡ್ತಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರ ಜೂನ್ 3, 2022ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಕಮಲ್ ಹಾಸನ್ ಸೂಪರ್ ಹಿಟ್ ಸಿನಿಮಾ ಲಿಸ್ಟ್ನಲ್ಲಿ ಈ ಸಿನೆಮಾ ಕೂಡಾ ಸೇರಿದೆ. ವಿಕ್ರಮ್ ಸಿನೆಮಾ ಸಕ್ಸಸ್ ಸೆಲೆಬ್ರೆಟ್ ಮಾಡಿರುವ ಕಮಲ್ ಹಾಸನ್ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಕಮಲ್ ಹಾಸನ್ ಖುಷಿಯಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸಲ್ಮಾನ್ಖಾನ್ ಮತ್ತು ಲೋಕೇಶನ್ ಕನಕರಾಜ್ ಪಾಲ್ಗೊಂಡು ಕಮಲ್ಹಾಸನ್ ಅವರಿಗೆ ಅಭಿನಂದಿಸುವ ಮೂಲಕ ಗೌರವ ಸಲ್ಲಿಸಿದರು.
ಚಿರಂಜೀವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಘಟಾನುಘಟಿ ನಟರು ಇರುವ ಕೆಲವು ಚಿತ್ರಗಳನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಲಿವುಡ್ ನಟ ಸಲ್ಮಾನ್ಖಾನ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರನ್ನು ಸಹ ಕಾಣಬಹುದು. ಈ ಫೋಟೊ ಜೊತೆ ಜೊತೆಗೆ ಚಿರಂಜೀವಿ ` ನನ್ನ ಆತ್ಮೀಯ ಸಲ್ಲುಭಾಯ್ @BeingSalmanKhan @Dir_Lokesh ಮತ್ತು ತಂಡದೊಂದಿಗೆ ನಿನ್ನೆ ರಾತ್ರಿ ನನ್ನ ಮನೆಯಲ್ಲಿ # ವಿಕ್ರಮ್ ಅವರ ಅದ್ಭುತ ಯಶಸ್ಸಿಗೆ ನನ್ನ ಹಿರಿಯ ಸ್ನೇಹಿತ @ikamalhaasan ಅವರ ಖುಷಿಯಲ್ಲಿ ಪಾಲ್ಗೊಂಡಿದ್ದೇವೆ. ಇದು ತುಂಬಾ ಕುತೂಹಲಕಾರಿ ಅಷ್ಟೆ ನಿಗೂಢ ಕಥಾ ಹಂದರವನ್ನ ಹೊಂದಿರುವ ಚಿತ್ರ.!! ಥ್ಯಾಂಕ್ಯೂ ಮೈ ಫ್ರೆಂಡ್ !! ದೇವರು ನಿನಗೆ ಹೆಚ್ಚಿನ ಶಕ್ತಿ ಕೊಡಲಿ! ಅಂತ ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.