alex Certify ಟರ್ಕಿ ಸಚಿವರ ಜೊತೆ ಭೋಜನ ಕೂಟದಲ್ಲಿ ಭಾಗಿಯಾದ ಸಲ್ಮಾನ್​ ​, ಕತ್ರೀನಾ ಕೈಫ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟರ್ಕಿ ಸಚಿವರ ಜೊತೆ ಭೋಜನ ಕೂಟದಲ್ಲಿ ಭಾಗಿಯಾದ ಸಲ್ಮಾನ್​ ​, ಕತ್ರೀನಾ ಕೈಫ್​..!

ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಹಾಗೂ ನಟಿ ಕತ್ರೀನಾ ಕೈಫ್​​ ಟರ್ಕಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮೆಹ್ಮೆತ್​ ನೂರಿ ಎರ್ಸೊಯ್​​ರನ್ನು ಭೇಟಿಯಾಗಿದ್ದಾರೆ. ಸಲ್ಮಾನ್​ ಹಾಗೂ ಕತ್ರೀನಾ ತಮ್ಮ ಮುಂಬರುವ ಸಿನಿಮಾ ಟೈಗರ್​3 ಶೂಟಿಂಗ್​ ಮುಕ್ತಾಯಗೊಳಿಸಿದ ಬಳಿಕ ಸಚಿವರ ಜೊತೆ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ಸಲ್ಮಾನ್​ ಖಾನ್​ ಹಾಗೂ ಕತ್ರೀನಾ ಕೈಫ್​ ಜೊತೆಗಿನ ಫೋಟೋವನ್ನು ನೂರಿ ಶೇರ್​ ಮಾಡಿದ್ದಾರೆ. ಈ ಫೋಟೋಗೆ ನೂರಿ, ಬಾಲಿವುಡ್​ನ ಪ್ರಸಿದ್ಧ ನಟರಾದ ಸಲ್ಮಾನ್​ ಖಾನ್ ಹಾಗೂ ಕತ್ರೀನಾ ಕೈಫ್​​ರನ್ನು ಭೇಟಿಯಾಗಿದ್ದೇನೆ, ಇವರೆಲ್ಲ ತಮ್ಮ ಹೊಸ ಪ್ರಾಜೆಕ್ಟ್​ಗಾಗಿ ನಮ್ಮ ದೇಶಕ್ಕೆ ಭೇಟಿ ನೀಡಿದ್ದರು. ಟರ್ಕಿಯು ಅಂತಾರಾಷ್ಟ್ರೀಯ ಸಿನಿಮಾ ಪ್ರಾಜೆಕ್ಟ್​ಗಳಿಗೆ ವೇದಿಕೆ ಕಲ್ಪಿಸುತ್ತದೆ ಎಂದು ಟರ್ಕಿಶ್​​ನಲ್ಲಿ ಶೀರ್ಷಿಕೆ ನೀಡಿದ್ದಾರೆ.

ಮನೀಷ್​​ ಶರ್ಮಾ ನಿರ್ದೇಶನ ಟೈಗರ್​ 3 ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಹಾಗೂ ಕತ್ರೀನಾ ಕೈಫ್​ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕೋವಿಡ್​ ಕಾರಣದಿಂದಾಗಿ ಈ ಸಿನಿಮಾದ ಶೂಟಿಂಗ್​ ಸ್ಥಗಿತಗೊಂಡಿತ್ತು.

— Mehmet Nuri Ersoy (@MehmetNuriErsoy) September 3, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...