ಟರ್ಕಿ ಸಚಿವರ ಜೊತೆ ಭೋಜನ ಕೂಟದಲ್ಲಿ ಭಾಗಿಯಾದ ಸಲ್ಮಾನ್ , ಕತ್ರೀನಾ ಕೈಫ್..! 05-09-2021 7:46AM IST / No Comments / Posted In: Featured News, Live News, Entertainment ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಹಾಗೂ ನಟಿ ಕತ್ರೀನಾ ಕೈಫ್ ಟರ್ಕಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮೆಹ್ಮೆತ್ ನೂರಿ ಎರ್ಸೊಯ್ರನ್ನು ಭೇಟಿಯಾಗಿದ್ದಾರೆ. ಸಲ್ಮಾನ್ ಹಾಗೂ ಕತ್ರೀನಾ ತಮ್ಮ ಮುಂಬರುವ ಸಿನಿಮಾ ಟೈಗರ್3 ಶೂಟಿಂಗ್ ಮುಕ್ತಾಯಗೊಳಿಸಿದ ಬಳಿಕ ಸಚಿವರ ಜೊತೆ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಜೊತೆಗಿನ ಫೋಟೋವನ್ನು ನೂರಿ ಶೇರ್ ಮಾಡಿದ್ದಾರೆ. ಈ ಫೋಟೋಗೆ ನೂರಿ, ಬಾಲಿವುಡ್ನ ಪ್ರಸಿದ್ಧ ನಟರಾದ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ರನ್ನು ಭೇಟಿಯಾಗಿದ್ದೇನೆ, ಇವರೆಲ್ಲ ತಮ್ಮ ಹೊಸ ಪ್ರಾಜೆಕ್ಟ್ಗಾಗಿ ನಮ್ಮ ದೇಶಕ್ಕೆ ಭೇಟಿ ನೀಡಿದ್ದರು. ಟರ್ಕಿಯು ಅಂತಾರಾಷ್ಟ್ರೀಯ ಸಿನಿಮಾ ಪ್ರಾಜೆಕ್ಟ್ಗಳಿಗೆ ವೇದಿಕೆ ಕಲ್ಪಿಸುತ್ತದೆ ಎಂದು ಟರ್ಕಿಶ್ನಲ್ಲಿ ಶೀರ್ಷಿಕೆ ನೀಡಿದ್ದಾರೆ. ಮನೀಷ್ ಶರ್ಮಾ ನಿರ್ದೇಶನ ಟೈಗರ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕೋವಿಡ್ ಕಾರಣದಿಂದಾಗಿ ಈ ಸಿನಿಮಾದ ಶೂಟಿಂಗ್ ಸ್ಥಗಿತಗೊಂಡಿತ್ತು. Yeni projeleri için ülkemizde bulunan Bollywood'un ünlü oyuncuları Salman Khan ve Katrina Kaif ile bir araya geldik. Türkiye çok sayıda uluslararası sinema projesine ev sahipliği yapmaya devam edecek. pic.twitter.com/5khIHGt3gY — Mehmet Nuri Ersoy (@MehmetNuriErsoy) September 3, 2021