ಕೊರೊನಾ ಲಸಿಕೆ ಅಭಿಯಾನಕ್ಕೆ ಚುರುಕು ಮುಟ್ಟಿದಾಗಿನಿಂದ ಕೋವಿಡ್ ಸೋಂಕಿನ ಸಂಖ್ಯೆಯು ಇಳಿಮುಖವಾಗುತ್ತಾ ಬಂದಿದೆ. ಹೀಗಾಗಿ ಅನೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ನಲ್ಲಿದ್ದ ಸಿಬ್ಬಂದಿಗೆ ಕಚೇರಿಗೆ ಆಗಮಿಸುವಂತೆ ಕರೆ ನೀಡುತ್ತಿವೆ.
ಕೋವಿಡ್ 19 ತಹಬದಿಗೆ ಬರುತ್ತಿರುವ ನಡುವೆಯೇ ಉದ್ಯೋಗಿಗಳಿಗೆ ಇನ್ನೊಂದು ಗುಡ್ ನ್ಯೂಸ್ ಇದೆ. ಈ ಶುಭ ಸುದ್ದಿ ಏನೆಂದರೆ ಉದ್ಯೋಗಿಗಳು ಉತ್ತಮ ಸಂಬಳ ಏರಿಕೆಯನ್ನು ಪಡೆಯಲಿದ್ದಾರೆ.
BREAKING: ಅಮೆರಿಕ ವಿಜ್ಞಾನಿಗಳ ಮುಡಿಗೆ ʼನೊಬೆಲ್ʼ ಪ್ರಶಸ್ತಿ ಗೌರವ
ಡೆಲಾಯ್ಟ್ ವರ್ಕ್ ಫೊರ್ಸ್ ಹಾಗೂ ಸಂಬಳ ಏರಿಕೆ ಎಂಬ ಶೀರ್ಷಿಕೆಯಲ್ಲಿ ನಡೆಸಲಾದ ಅಧ್ಯಯನದಲ್ಲಿ 92 ಪ್ರತಿಶತ ಕಂಪನಿಗಳು ಈ ವರ್ಷದಲ್ಲಿ ಸಿಬ್ಬಂದಿಗೆ ಸಂಬಳ ಏರಿಕೆ ಮಾಡಲಿವೆ. ಕಳೆದ ವರ್ಷ ಕೇವಲ 60 ಪ್ರತಿಶತ ಕಂಪನಿಗಳು ಮಾತ್ರ ಸಿಬ್ಬಂದಿಗೆ ಸಂಬಳ ಏರಿಕೆ ಮಾಡಿದ್ದವು. ಕಳೆದ ವರ್ಷ ಕೇವಲ 4.4 ಪ್ರತಿಶತ ಮಾತ್ರ ವೇತನ ಏರಿಕೆ ಮಾಡಲಾಗಿತ್ತು. ಆದರೆ ಈ ಬಾರಿ ದ್ವಿಗುಣ ಅಂದರೆ 8.0 ಪ್ರತಿಶತ ವೇತನ ಏರಿಕೆ ಇರಲಿದೆ.
ಇನ್ನು 2022ರಲ್ಲಿ ಅರ್ಥ ವ್ಯವಸ್ಥೆ ಸುಧಾರಿಸಲಿದೆ ಎಂಬ ನಂಬಿಕೆಯೊಂದಿಗೆ 8.6ರಷ್ಟು ವೇತನ ಏರಿಕೆ ನಿರೀಕ್ಷಿಸಲಾಗಿದೆ. ಒಂದು ವೇಳೆ ಈ ರೀತಿಯಾದಲ್ಲಿ ಸಂಬಳ ಏರಿಕೆಯ ಪ್ರಮಾಣವು ಮತ್ತೆ 2019ರಲ್ಲಿ ಇದ್ದ ಹಾಗೆಯೇ ಸಹಜ ಸ್ಥಿತಿಗೆ ಬರಲಿದೆ.