alex Certify ಬಾಲಿವುಡ್ ದಂತಕತೆ ದಿ. ದಿಲೀಪ್​ ಕುಮಾರ್​ ಪತ್ನಿ ಆಸ್ಪತ್ರೆಗೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ದಂತಕತೆ ದಿ. ದಿಲೀಪ್​ ಕುಮಾರ್​ ಪತ್ನಿ ಆಸ್ಪತ್ರೆಗೆ ದಾಖಲು

ಪತಿ ಹಾಗೂ ಬಾಲಿವುಡ್ ಹಿರಿಯ ನಟ ದಿಲೀಪ್​ ಕುಮಾರ್​ ನಿಧನರಾದ ತಿಂಗಳ ಬಳಿಕ ಇದೀಗ ಪತ್ನಿ ಸೈರಾ ಬಾನು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಖಾರ್​ನ ಹಿಂದೂಜಾ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡ ಕಾರಣಕ್ಕೆ ಮೂರು ದಿನಗಳ ಹಿಂದೆ ಸೈರಾ ಬಾನು ದಾಖಲಾಗಿದ್ದರು. ಇದೀಗ ಅವರನ್ನು ಐಸಿಯುವಿಗೆ ಶಿಫ್ಟ್​ ಮಾಡಲಾಗಿದೆ.

ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಸೈರಾ ಬಾನುಗೆ ಲಘು ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
98 ವರ್ಷ ಪ್ರಾಯದವರಾಗಿದ್ದ ದಿಲೀಪ್​ ಕುಮಾರ್​ ಈ ವರ್ಷದ ಜುಲೈ ತಿಂಗಳಲ್ಲಿ ನಿಧನರಾಗಿದ್ದರು. ದಿಲೀಪ್​ ಕುಮಾರ್​ – ಸೈರಾ ಬಾನು 1966ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...