ಪತಿ ಹಾಗೂ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನರಾದ ತಿಂಗಳ ಬಳಿಕ ಇದೀಗ ಪತ್ನಿ ಸೈರಾ ಬಾನು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಖಾರ್ನ ಹಿಂದೂಜಾ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡ ಕಾರಣಕ್ಕೆ ಮೂರು ದಿನಗಳ ಹಿಂದೆ ಸೈರಾ ಬಾನು ದಾಖಲಾಗಿದ್ದರು. ಇದೀಗ ಅವರನ್ನು ಐಸಿಯುವಿಗೆ ಶಿಫ್ಟ್ ಮಾಡಲಾಗಿದೆ.
ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಸೈರಾ ಬಾನುಗೆ ಲಘು ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
98 ವರ್ಷ ಪ್ರಾಯದವರಾಗಿದ್ದ ದಿಲೀಪ್ ಕುಮಾರ್ ಈ ವರ್ಷದ ಜುಲೈ ತಿಂಗಳಲ್ಲಿ ನಿಧನರಾಗಿದ್ದರು. ದಿಲೀಪ್ ಕುಮಾರ್ – ಸೈರಾ ಬಾನು 1966ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.