alex Certify ರಾಣಿ ಮುಖರ್ಜಿ ನಿರಾಕರಿಸಿದ್ರೂ ಮುತ್ತಿಟ್ಟಿದ್ದ ಸೈಫ್ ಅಲಿ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಣಿ ಮುಖರ್ಜಿ ನಿರಾಕರಿಸಿದ್ರೂ ಮುತ್ತಿಟ್ಟಿದ್ದ ಸೈಫ್ ಅಲಿ ಖಾನ್

ಬಾಲಿವುಡ್ ನಲ್ಲಿ ಅನೇಕ ಜೋಡಿಗಳು ತೆರೆ ಮೇಲೆ ಮೋಡಿ ಮಾಡುತ್ತವೆ. ಈಗ್ಲೂ ಕೆಲ ಹಿರಿಯ ನಟರನ್ನು ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಬಯಸ್ತಾರೆ. ಅದ್ರಲ್ಲಿ ಸೈಫ್ ಅಲಿ ಖಾನ್ ಮತ್ತು ರಾಣಿ ಮುಖರ್ಜಿ ಹೆಸರು ಸೇರಿದೆ. ಇಬ್ಬರೂ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಮತ್ತೆ ಒಟ್ಟಿಗೆ ತೆರೆ ಮೇಲೆ ಬರ್ತಿದ್ದಾರೆ. ಬಂಟಿ ಔರ್ ಬಬ್ಲಿ 2 ಚಿತ್ರದಲ್ಲಿ ಸೈಫ್ ಮತ್ತು ರಾಣಿ ಮತ್ತೆ ಒಂದಾಗಿದ್ದಾರೆ.

ಬಂಟಿ ಔರ್ ಬಬ್ಲಿ 2 ಚಿತ್ರ ಪ್ರಚಾರ ಭರದಿಂದ ಸಾಗಿದೆ. ನವೆಂಬರ್ 19ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರದ ಪ್ರಚಾರದ ವೇಳೆ ಹಳೆ ಕಥೆಯೊಂದನ್ನು ರಾಣಿ ಹಂಚಿಕೊಂಡಿದ್ದಾರೆ. ಹಮ್ ತುಮ್ ಚಿತ್ರದ ಕಿಸ್ಸಿಂಗ್ ದೃಶ್ಯದ ಬಗ್ಗೆ ರಾಣಿ ಮಾತನಾಡಿದ್ದಾರೆ.

ಹಮ್-ತುಮ್ ಚಿತ್ರದಲ್ಲಿ ರಾಣಿ ಹಾಗೂ ಸೈಫ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯವೊಂದಿದೆ. ರಾಣಿ ಮುಖರ್ಜಿಗೆ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಗೆ ಮುತ್ತಿಡಲು ಇಷ್ಟವಿರಲಿಲ್ಲವಂತೆ. ನಿರ್ದೇಶಕರಿಗೆ ಈ ವಿಷ್ಯ ಹೇಳುವಂತೆ ರಾಣಿ, ಸೈಫ್ ಗೆ ಹೇಳಿದ್ದರಂತೆ. ಆದ್ರೆ ಸೈಫ್, ಇದಕ್ಕೆ ಒಪ್ಪಿರಲಿಲ್ಲವಂತೆ. ಬಾಸ್ ಹೇಳಿದಂತೆ ಮಾಡುವುದು ನನ್ನ ಕರ್ತವ್ಯ ಎಂದಿದ್ದರಂತೆ. ಆದ್ರೆ ಸಿನಿಮಾ ಪ್ರಪಂಚದ ಇತಿಹಾಸದಲ್ಲಿ ಇದು ಅತ್ಯಂತ ಕೆಟ್ಟ ಚುಂಬನ ದೃಶ್ಯವಾಗಿತ್ತು ಎಂದು ಸೈಫ್ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...