ಗರ್ಭಿಣಿಯರಿಗೆ ಹಾಲು ಕುಡಿಯುವಾಗ ಎರಡು ದಳ ಕೇಸರಿ ಉದುರಿಸಿ ಕುಡಿಯಲು ಕೊಡುವುದನ್ನು ನೀವು ಕಂಡಿರಬಹುದು. ಅನೇಕ ಸಿಹಿ ತಿಂಡಿಗಳನ್ನು ತಯಾರಿಸುವಾಗ ಹಾಗೂ ಅಡುಗೆ ತಯಾರಿಸುವ ವೇಳೆ ಕೇಸರಿ ದಳ ರುಚಿ ಹೆಚ್ಚಳಕ್ಕಾಗಿ ಬಳಸುತ್ತಾರೆ. ಇದರ ಪ್ರಯೋಜನವೇನು ಗೊತ್ತೇ?
ತುಸು ದುಬಾರಿಯಾದ ಕೇಸರಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ಚಳಿಯಿಂದ ಒಣಗಿದ ನಿಮ್ಮ ತ್ವಚೆ ಹೊಳಪು ಪಡೆಯುತ್ತದೆ.
ಎರಡು ಎಸಳು ಕೇಸರಿ ದಳವನ್ನು ದಪ್ಪನೆಯ ಹಾಲಿನಲ್ಲಿ ನೆನೆಸಿ ಒಂದು ಗಂಟೆ ಹೊತ್ತು ಪಕ್ಕಕ್ಕಿಡಿ. ಬಳಿಕ ಗಂಧದ ಪುಡಿ ಬೆರೆಸಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಳ್ಳಿ. ಒಂದು ತಿಂಗಳಲ್ಲಿ ನಿಮ್ಮ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ.
ಹಾಲಿನ ಕೆನೆಯಲ್ಲಿ ಕೇಸರಿ ನೆನೆಸಿ ಮುಖಕ್ಕೆ ಹಚ್ಚಿಕೊಂಡರೆ ಮೊಡವೆ ಕಲೆಗಳು ಮಾಯವಾಗುತ್ತವೆ. ತ್ವಚೆಗೆ ಟೋನರ್ ಆಗಿಯೂ ಇದನ್ನು ಬಳಸಲಾಗುತ್ತದೆ. ಕೇಸರಿಯನ್ನು ಸಂಗ್ರಹಿಸಿಡುವಾಗ ಗಾಳಿಯಾಡದ ಡಬ್ಬಿಯಲ್ಲೇ ಹಾಕಿಡಿ. ಗಾಜಿನ ಬಾಟಲಿಯಾದರೆ ಬಹಳ ಒಳ್ಳೆಯದು. ತೇವಾಂಶವಿಲ್ಲದ ಡಬ್ಬಿಯಲ್ಲಿ ಬಿಸಿ ತಾಕದ ಜಾಗದಲ್ಲಿ ಸಂರಕ್ಷಿಸಿಡಿ. ಹಲವು ವರ್ಷಗಳ ತನಕ ಇದು ಹಾಳಾಗದು.